ನಿನ್ನೆಯಿಂದ ಮನಸ್ಸು ತೀವ್ರ ದುಃಖಭಾವದಲ್ಲಿದೆ. ದೀಪಕ್ ಹತ್ಯೆಯ ನಂತರ ಇನ್ನೆರಡು ಇರಿತಗಳೂ ನಡೆದಿವೆ. ದೀಪಕ್ ನನ್ನು ಹತ್ಯೆಗೈದವರನ್ನು ಪ್ರತಿರೋಧಿಸಿದ್ದು ಮುಸ್ಲಿಮರು. ದೀಪಕ್ ಕೆಲಸ ಮಾಡುತ್ತಿದ್ದುದೇ ಮುಸ್ಲಿಂ ಮಾಲಕರ ಬಳಿ. ರಾತ್ರಿ ಇರಿತಕ್ಕೊಳಗಾಗಿ ಬಿದ್ದಿದ್ದ ಬಷೀರ್ ಎಂಬ ವ್ಯಾಪಾರಿಯ ಜೀವವುಳಿಸಲು ಹೆಣಗಾಡಿದ್ದು ಹಿಂದೂಗಳು. ಜಿಲ್ಲೆಯ ಹಿಂದೂ ಮತ್ತು ಮುಸ್ಲಿಮರು ವೈರಿಗಳಾಗಿ ವಿಭಜನೆಗೊಂಡಿಲ್ಲ ಅನ್ನುವುದಕ್ಕೆ ಪುಟ್ಟ ಗುರುತುಗಳು ಇವು. ಸದ್ಯ ಈ ಗುರುತುಗಳಿಗೆ ಹೆಚ್ಚು ಪ್ರಚಾರ ಲಭ್ಯವಾಗಬೇಕು. ಇಂಥ ಇನ್ನಷ್ಟು ಗುರುತುಗಳು ಸೃಷ್ಟಿಯಾಗುವ ಮೂಲಕ ಕ್ರೂರಿಗಳು ಭಯಪಡುವ ಸ್ಥಿತಿಗೆ ತಲುಪಬೇಕು. ದೀಪಕ್ ನನ್ನು ಕೊಂದವರು ನನ್ನ ಧರ್ಮದೊಂದಿಗೆ ಗುರುತಿಸಿಕೊಂಡವರು ಎಂಬುದಕ್ಕೆ ನನ್ನಲ್ಲಿ ಗಾಢ ವಿಷಾದವಿದೆ. ನನ್ನ ಧರ್ಮ ದೀಪಕ್ ನ ವಿರೋಧಿಯಲ್ಲ. ಈ ಹತ್ಯೆಕೋರರ ವಿರೋಧಿ. ಅವರು ಮನುಷ್ಯ ವಿರೋಧಿಗಳು. ಧರ್ಮ ದ್ರೋಹಿಗಳು. ಅವರಿಗೆ ಗಲ್ಲಾಗುವುದಾದರೆ ಅದನ್ನು ಬೆಂಬಲಿಸುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ.

ಏ. ಕೆ. ಕುಕ್ಕಿಲ

Leave a Reply