ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಮಹಾ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್‍ರ ಜನನವು 1897ರ ಮಾರ್ಚ್ 14ರಂದು ಆಯಿತು. ಆರಂಭದಿಂದಲೂ ಅವರಿಗೆ ಗಣಿತದ ಬಗ್ಗೆ ಅಪಾರ ಆಸಕ್ತಿ ಇತ್ತು. ವೈಜ್ಞಾನಿಕ ಉಪಕರಣಗಳನ್ನು ಕೂಡಾ ಬಹಳ ಇಷ್ಟಪಡುತ್ತಿದ್ದರು. ಅದರೊಂದಿಗೆ ಆಟವಾಡುವುದು, ಅವರ ಬಗ್ಗೆ ತಿಳಿದುಕೊಳ್ಳು ವುದು ಬಾಲ್ಯದಲ್ಲಿ ಅವರ ಇತ್ಯಾದಿ ಹವ್ಯಾಸವಾಗಿತ್ತು. ಒಂದು ದಿನ ಅವರ ತಂದೆಯವರು ಅವರಿಗೆ ಜೇಬಿನಲ್ಲಿರಿಸುವ ‘ಕಂಪಾಸ’ನ್ನು ಉಡುಗೊರೆಯಾಗಿ ನೀಡಿದ್ದರು. ಆ ವೇಳೆ ಅವರಿಗೆ ಕೇವಲ 5 ವರ್ಷ ಪ್ರಾಯವಾಗಿತ್ತು. ಅವರು ಅದರಲ್ಲಿ ಆಟವಾಡುವುದರ ಬದಲಾಗಿ ಅವರೊಂದಿಗೆ ಹೊಸ ಪ್ರಯೋಗಗಳನ್ನು ಆರಂಭಿಸಿದರು.

ಮಹಾ ವಿದ್ವಾಂಸ

ಐನ್‍ಸ್ಟೀನ್ ಜರ್ಮನಿಯವರಾಗಿದ್ದರೂ ಅವರ ಪ್ರತಿಭೆಗಳು ಸ್ವಿಝರ್‍ಲ್ಯಾಂಡ್‍ನಲ್ಲಿ ವಿಕಾಸ ಹೊಂದಿದವು. ಸ್ವಿಝರ್‍ಲ್ಯಾಂಡಿನ ಜ್ಯೂರಿಕ್ ಯುನಿವರ್ಸಿಟಿಯಲ್ಲಿ ಅವರು ಕಲಿಯುತ್ತಿದ್ದರು. ಅಲ್ಲಿಯೇ ಅವರು ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಮಹಾ ವಿದ್ವಾಂಸರಾಗಿ ಹೊರಹೊಮ್ಮಿದರು. ಇಲ್ಲಿ ಅವರು ನಡೆಸಿದ ಮಹಾನ್ ಸಂಶೋಧನೆ ಗಳಿಂದಾಗಿಯೇ ಜಗತ್ತು ಇಂದಿಗೂ ಈ ಮಹಾ ವ್ಯಕ್ತಿಯನ್ನು ಸದಾ ಸ್ಮರಿಸುತ್ತಿದೆ.

ಮಹಾನ್ ಸಾಧಕ

ಈ ಮಹಾನ್ ವಿಜ್ಞಾನಿಯ ಸಿದ್ಧಾಂತಗಳ ಕುರಿತು ಇಂದಿಗೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಇವರ ಸಿದ್ಧಾಂತಗಳ ಪೈಕಿ ‘ಸ್ಪೆಶಲ್ ಥಿಯರಿ ಆಫ್ ರಿಲೇಟಿವಿಟಿ’ ಬಹಳ ಪ್ರಸಿದ್ಧ ಹಾಗೂ ವಿಜ್ಞಾನಿಕ ಜಗತ್ತು ಇಂದಿಗೂ ನೆನಪಿಸಿಕೊಳ್ಳುವ ಸಿದ್ಧಾಂತವಾಗಿದೆ. ಅವರ ಸಿದ್ಧಾಂತವು ಎಷ್ಟು ಅಗತ್ಯವಾಗುತ್ತಿತ್ತೋ ಅದನ್ನು ಅರ್ಥೈಸಿಕೊಳ್ಳುವುದು ಅಷ್ಟೇ ಕಠಿಣತರ ಕೆಲಸವಾಗಿತ್ತು. ಆದುದರಿಂದಲೇ ಅವರ ‘ಥಿಯರಿ ಆಫ್ ರಿಲೇಟಿವಿಟಿ’ಯನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಳ್ಳುವುದು ಜನಸಾಮಾನ್ಯರಿಂದ ಸಾಧ್ಯವಾಗುತ್ತಿಲ್ಲ. ವಾಸ್ತವದಲ್ಲಿ ಇದೇ ಸಿದ್ಧಾಂತವು ಅವರಿಗೆ ವೈಜ್ಞಾನಿಕ ರಂಗದಲ್ಲಿ ಬಹಳ ಉನ್ನತ ಸ್ಥಾನವನ್ನು ದೊರಕಿಸಿ ಕೊಟ್ಟಿತು. 1921ರಲ್ಲಿ ಇದಕ್ಕಾಗಿಯೇ ನೋಬೆಲ್ ಪ್ರಶಸ್ತಿ ಕೂಡಾ ಲಭಿಸಿತು.

ಶಾಂತಿ ಮತ್ತು ಪ್ರೀತಿ

1945ರಲ್ಲಿ ಆಟಂ ಬಾಂಬ್‍ಗಳ ಸೃಷ್ಟಿಯಾಯಿತೆಂದು ನಿಮಗೆ ತಿಳಿದಿದೆ. ಆದರೆ ಇವರ ಇನ್ನೊಂದು ಪ್ರಸಿದ್ಧ ಸಿದ್ಧಾಂತವಾದ ಇರೈವೇಲೆನ್ಸ್ ಬಿಟ್ವೀನ್ ವಿೂಟರ್ ಆಂಡ್ ಎನರ್ಜಿಯನ್ನು ಕಾರಣದಿಂದ ಆಟಂ ಬಾಂಬ್ ಸೃಷ್ಟಿಸಲಾಯಿತು. ಇದು ನಿಮಗೆ ತಿಳಿದಿತ್ತೇ? ಆಟಂ ಬಾಂಬ್ ಅಥವಾ ನ್ಯೂಕ್ಲಿಯರ್ ಎನರ್ಜಿಯನ್ನು ಅವರು ವಿನಾಶಕಾರಿ ಘಟನೆಗಳಿಗೆ ಉಪಯೋಗಿಸಲಿಕ್ಕಾಗಿ ಅಲ್ಲ ಬದಲಾಗಿ ವಿಕಾಸಕ್ಕಾಗಿ ಉಪಯೋಗಿಸ ಬಯಸಿದ್ದರು.

Leave a Reply