ಸಾಂದರ್ಭಿಕ ಚಿತ್ರ

ಅಲೀಘಡ್: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಅಲೀಘಡದಲ್ಲಿ ನಡೆದಿದೆ. ಅತ್ಯಾಚಾರಕ್ಕೀಡಾಗಿ ಎರಡು ದಿನಗಳ ಬಳಿಕ ಈ ಅಪ್ರಾಪ್ತ ಬಾಲಕಿ ಆತ್ಮ ಹತ್ಯೆ ಮಾಡಿದ್ದಾಳೆ.

ನೈಸರ್ಗಿಕ ಅಗತ್ಯಕ್ಕಾಗಿ ಹೊರ ಹೋದ ಸಂದರ್ಭದಲ್ಲಿ ಈರ್ವರು ಯುವಕರು ಕಳೆದ ಶುಕ್ರವಾರ ಈಕೆಯನ್ನು ಅತ್ಯಾಚಾರ ಗೈದಿದ್ದರು. ಸೋಮವಾರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆ ಆತ್ಮಹತ್ಯೆಗೈದಿದ್ದಾಳೆ.

ತೀವ್ರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಫಲ ನೀಡಲಿಲ್ಲ. ಕೇಸು ದಾಖಲಿಸಿದ ಪೋಲೀಸರು ಈರ್ವರನ್ನು ಈಗಾಗಲೇ ಬಂಧಿಸಿದ್ದಾರೆ.

Leave a Reply