ಪತಿಯೊಂದಿಗೆ ಹೋಗುತ್ತಿದ್ದ ಮಹಿಳೆಯನ್ನು ಐದು ಜನರ ಗುಂಪೊಂದು ಗ್ಯಾಂಗ್ ರೇಪ್ ಮಾಡಿದೆ ಹಾಗೂ ಪತಿಗೆ ಥಳಿಸಿದ ಘಟನೆ ‌ನಡೆದಿದೆ.
ರಾಜಸ್ಥಾನದ ಅಲ್ವರ್ ಎಂಬಲ್ಲಿ ಐದು ಜನರ ತಂಡವು ಬೈಕ್ ನಲ್ಲಿ ಹೋಗುತ್ತಿದ್ದ ಪತಿ-ಪತ್ನಿಯನ್ನು ನಿಲ್ಲಿಸಿ ಮೊದಲು ಪತಿಯ ಮೇಲೆ ಹಲ್ಲೆ ನಡೆಸಿ ನಂತರ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ.
ಎಫ್ಐಆರ್ ಪ್ರಕಾರ ಆರೋಪಿಗಳು ಘಟನೆಯ ವೀಡಿಯೋ ಮಾಡಿದ್ದು, ಪೋಲಿಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ದಂಪತಿಗೆ ಬೆದರಿಕೆಯೊಡ್ಡಿದ್ದಾರೆ.

ಅವರು ನಮ್ಮನ್ನು ತಡೆದು ಮೊದಲು ನನಗೆ ಹಲ್ಲೆ ಮಾಡಿದರು. ಬಳಿಕ ನನ್ನ ಪತ್ನಿಯ ಬಟ್ಟೆ ಹರಿದು ವಿಡಿಯೋ ಮಾಡಲು ತೊಡಗಿದರು. ನನವರಲ್ಲಿ ವಿಡಿಯೋ ಮಾಡದಿರಿ ನಮ್ಮನ್ನು ಹೋಗಲು ಬಿಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವರು ನಮ್ಮನ್ನು ಬಿಡಲಿಲ್ಲ. ಮರು ದಿನ ನಮ್ಮನ್ನು ಭೇಟಿಯಾಗಿ ಹತ್ತು ಸಾವಿರ ಕೊಡಬೇಕು ಇಲ್ಲದಿದ್ದರೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಗಂಡ ಇಂಡಿಯಾ ಟಿವಿ ಯೊಂದಿಗೆ ಹೇಳಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಶೋಧ ನಡೆಯುತ್ತಿದೆ.

 

Leave a Reply