ಜೀವನದಲ್ಲಿ ಎಲ್ಲರಿಗೂ ಪ್ರಾಧಾನ್ಯತೆ ನೀಡಬೇಕೆಂದು ಶಾಲೆಯೊಂದು ವಿಡಿಯೋ ಮಾಡಿ ತೋರಿಸಿದೆ. ಶಾಲೆಯ ಕಿವುಡ ವಿದ್ಯಾರ್ಥಿಗಾಗಿ ಅವರು ಸ್ಪೆಷಲ್ ಪ್ರೋಗ್ರಾಮ್ ಇಟ್ಟಿದ್ದರು. 6 ವರ್ಷದ ಮೋರ್ರೆ ಬೆಲಾಂಜರ್, ಡೇಟನ್ ನಲ್ಲಿ ಶಾಲೆಗೆ ಹಾಜರಾಗಲು ಬಂದ ಮೊದಲ ಕಿವುಡ ವಿದ್ಯಾರ್ಥಿ. ಆದ್ದರಿಂದ ಆಕೆಯನ್ನು ವಿಶಿಷ್ಟವಾಗಿ ಸ್ವಾಗತಿಸಬೇಕು ಎಂದು ಶಾಲೆಯು ತೀರ್ಮಾನಿಸಿತು.
ಶಾಲೆಯವರು ಮೂಕ ಮಕ್ಕಳ ಭಾಷೆಯನ್ನು ಕಲಿತಿದ್ದು, ಆಕೆಗೆ ಅರ್ಥವಾಗುವಂತೆ ಮಾಡಿದ್ದು ಮಾತ್ರವಲ್ಲ ಆಕೆಯ ಭಾವನೆಗೂ ಬೆಲೆ ಕೊಟ್ಟರು. ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಆಕೆ ಕಂಫರ್ಟ್ ಆಗಿರುವಂತೆ ಮಾಡಿದರು. ಮಾತ್ರವಲ್ಲ, ಎಲ್ಲ ಮಕ್ಕಳಿಗೆ ಮೂಕ ಭಾಷೆಯನ್ನುಒಂದು ವರ್ಷದ ಕೋರ್ಸ್ ಮೂಲಕ ಕಲಿಸಲು ಶಾಲೆ ತೊಡಗಿತು. ಸಿಂಡ್ರೆಲ್ಲಾಳಂತೆ ವಸ್ತ್ರ ಧರಿಸಿದ ಯುವತಿಯು ಮೂಕ ಭಾಷೆಯ ಮೂಲಕ ಪುಟ್ಟ ಹುಡುಗಿಯನ್ನು ಸ್ವಾಗತಿಸಿದಳು. ಹೀಗೆ ಮಗು ಪುಳಕಿತಗೊಂಡ ವಿಡಿಯೋ ನೀವು ನೋಡಿ ಪುಳಕಿತಗೊಳ್ಳಿ …

Leave a Reply