ಆನಂದ್ ಮಹೀಂದ್ರಾ ಪ್ರತಿ ಬಾರಿ ಜನ ಸಾಮಾನ್ಯರ ಸ್ಮಾರ್ಟ್ ಆವಿಷ್ಕಾರಗಳ ಚಿತ್ರ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಅವುಗಳಲ್ಲಿ ವಿಶಿಷ್ಟವಾದವರಿಗೆ ಉಡುಗೊರೆಯನ್ನೂ ನೀಡುತ್ತಾರೆ. ಈ ಹಿಂದೆ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ಆಗಿ ಪರಿವರ್ತಿಸಿದ ವ್ಯಕ್ತಿಯ ಅಟೋ ಪಡೆದು ಮಹೀಂದ್ರಾ ಸ್ಕಾರ್ಪಿಯೋ ಮೂಸಿಯಂ ನಲ್ಲಿ ಇಟ್ಟು ಅವರಿಗೆ ಬೇರೆ ಮಹೀಂದ್ರಾ ವಾಹನ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು. ಭಾರತದ ಪ್ರತಿಷ್ಠಿತ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಟ್ವೀಟ್ ಮೂಲಕ ಇನ್ನೊಂದು ವಿಡಿಯೋ ಶೇರ್ ಮಾಡಿದ್ದಾರೆ.  ಪ್ಲಾಸ್ಟಿಕ್ ಬಾಟಲಿಯನ್ನು ಶವರ್ ಮಾಡಿ ಸ್ನಾನ ಮಾಡುವ ಜುಗಾಡ್ (ಕಸದಿಂದ ರಸ) ಮಾಡಿದ ವಿಡಿಯೋ ಆಗಿದೆ ಅದು. ಜೀವನದಲ್ಲಿ ಜನರು ತಮ್ಮ ಸಂತೋಷವನ್ನು ಕಂಡುಕೊಳ್ಳುವ ಇಂತಹವರಿಗೆ ಸೆಲ್ಯೂಟ್ ಎಂದೂ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ವಿಡಿಯೋ ನೋಡಿ

Leave a Reply