ಮುಂಬೈ: ಬಿಜೆಪಿ ಶಾಸಕ ರಾಮ್ ಕದಮ್ ಮಹಿಳಾ ವಿರೋಧಿ ಹೇಳಿಕೆಗೆ ಕ್ಷಮೆ ಯಾಚಿಸಿದ್ದು ಇಲ್ಲಿಗೆ ಈ ಅಧ್ಯಾಯ ಮುಗಿಯಿತೆಂದು ಬಿಜೆಪಿ ವಕ್ತಾರ ಮಾಧವ್ ಬಂಢಾರಿ ಹೇಳಿದರು. ಶಾಸಕರ ಖೇದ ಅಭಿವ್ಯಕ್ತಿಯೊಂದಿಗೆ ಪಾರ್ಟಿಗೆ ಸಂಬಂಧಿಸಿದಂತೆ ಈ ವಿಷಯ ಕೊನೆಗೊಂಡಿತು. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಅಗತ್ಯವಿಲ್ಲ ಎಂದು ಭಂಡಾರಿ ಹೇಳಿದರು.

ಪ್ರೇಮ ಯಾಚನೆ ಮಾಡಿದರೆ ತಿರಸ್ಕರಿಸುವ ಹೆಣ್ಣು ಮಕ್ಕಳನ್ನು ಅಪಹರಿಸಿ ತಂದು ಕೊಡುವೆ ಎಂದು ಘಾಟ್‍ಕೋಪರ್‍ನಲ್ಲಿ ಶಾಸಕ ಕದಂ ಧಮಕಿ ಹಾಕಿದ್ದರು. ಶಿವಸೇನೆ ಈ ಕುರಿತು ಉಗ್ರವಾಗಿ ಪ್ರತಿಕ್ರಿಯಿಸಿತು. ಮಹಿಳಾ ವಿರೋಧಿ ಹೇಳೀಕೆ ನೀಡಿದ ಶಾಸಕರ ವಿರುದ್ಧ ಕ್ರಮ ಜರಗಿಸಬೇಕೆಂದು ಆಗ್ರಹಿಸಿತು.

ಬಿಜೆಪಿ ವಕ್ತಾರ ಭಂಡಾರಿ ಪ್ರತಿಪಕ್ಷಗಳು ಇಂತಹ ವಿಷಯಗಳನ್ನೆತ್ತಿಕೊಂಡು ರಂಪಾಟ ಮಾಡುತ್ತಿವೆ. ಅವುಗಳಿಗೆ ಜನಪರ ವಿಷಯಗಳಲ್ಲಿ ಆಸಕ್ತಿಯಿಲ್ಲ ಎಂದು ಟೀಕಿಸಿದರು.
” ನೀವು ಹುಡುಗಿಯರಲ್ಲಿ ಪೇಮಯಾಪನೆ ಮಾಡಿದ್ದು, ಆಕೆ ಅದನ್ನು ತಿರಸ್ಕರಿಸಿದ್ದರೆ ನಿಮ್ಮ ತಂದೆ ತಾಯಿಯರನ್ನು ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಅವರಿಗೂ ಹುಡುಗಿ ಇಷ್ಟವಾದರೆ ನಾನು ಅವಳನ್ನು ಅಪಹರಿಸಿ ನಿಮಗೆ ತಂಧೂ ಕೊಡುವೆ” ಎಂದು ರಾಮ್ ಕದಂ ಹೇಳಿದದರು.

Leave a Reply