ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈಯಿಂದ ಭಯಾನಕ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಮುಂಬೈನ ಕುರ್ಲಾ ಪ್ರದೇಶದ ಬ್ರಿಡ್ಜ್ ನಲ್ಲಿ ದಾರಿಯಲ್ಲಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡುವ ದೃಶ್ಯ ನೋಡಬಹುದು. ಈ ಸಮಯದಲ್ಲಿ, ಸೇತುವೆಯ ಮೇಲೆ ಅನೇಕ ಜನರು ಹಾಜರಿದ್ದರು. ಹಲ್ಲೆ ಕೋರ ವ್ಯಕ್ತಿಯನ್ನು ಹಿಂಬಾಲಿಸಿ ಹಲ್ಲೆ ಮಾಡಿದ್ದಾನೆ ಎಂಬುದು ವಿಡಿಯೋ ತುಣುಕಿನಲ್ಲಿ ಕಾಣುತ್ತಿದೆ. ಸಂತ್ರಸ್ತ ಆತನ ದಾಳಿಯಿಂದ ಹೇಗೋ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾನೆ. ದಾಳಿಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

Leave a Reply