ರಾಜಸ್ತಾನ; ರಾಜಸ್ತಾನದ ಚುರು ಜಿಲ್ಲೆಯಲ್ಲಿ ಎಂಬಲ್ಲಿ ಮಹಿಳೆಯೊಬ್ಬಳು ಅತ್ತೆ ಮತ್ತು ನಾದಿನಿಯ ವಿರುದ್ಧ ದೂರು ದಾಖಲು ಮಾಡಲು ನಗ್ನವಾಗಿ ಪೊಲೀಸ್ ಠಾಣೆಗೆ ಬಂದ ಘಟನೆ ವರದಿಯಾಗಿದೆ. ಅತ್ತೆ ಮತ್ತು ನಾದಿನಿ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯ ಬಟ್ಟೆಯನ್ನು ಕಳಚಿದ್ದರು. ಜನರು ಆಕೆಗೆ ಸಹಾಯ ಮಾಡುವ ಬದಲು ಆಕೆಯ ವಿಡಿಯೋ ಚಿತ್ರೀಕರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಚುರು ಜಿಲ್ಲೆಯ ಬಿದಾಸರ್ ಎಂಬ ಊರಿನಲ್ಲಿ ಈ ಘಟನೆ ನಡೆದಿದ್ದು, ಅತ್ತೆ ಮತ್ತು ನಾದಿನಿ ಹಿಂಸೆ ನೀಡಿ, ಬಟ್ಟೆಯನ್ನು ಹರಿದಿದ್ದಾರೆ. ನನ್ನ ಗಂಡನ ಅನುಪಸ್ಥಿತಿಯಲ್ಲಿ ನನಗೆ ನಿರಂತರ ಹಿಂಸೆ ನೀಡಿದ್ದಾರೆ. ಕೊನೆಗೆ ಹಿಂಸೆ ತಡೆಯಲಾರದೆ ಅದೇ ಸ್ಥಿತಿಯಲ್ಲಿ ತಾನು ದೂರು ನೀಡಲು ಬಂದಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಬಲಿಪಶು ಮಹಿಳೆಯ ಪತಿ ಅಸ್ಸಾಂನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಹಿಳೆ ಮಹಾರಾಷ್ಟ್ರದ ಅಕೋಲಾ ಪ್ರದೇಶದವರು. ಮದುವೆಯ ನಂತರ ಅವರು ಚುರುಗೆ ಬಂದಿದ್ದರು. ಜನರು ಆಕೆಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ, ಸುರಕ್ಷತೆಯ ನಿಟ್ಟಿನಲ್ಲಿ ಠಾಣೆಯ ಸಿಸಿ ಟಿವಿಯಲ್ಲಿ ಸೆರೆಯಾದ ಆಕೆಯ ವಿಡಿಯೋವನ್ನೂ ಡಿಲೀಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಂತ್ರಸ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಸಂಬಂಧಿಕರನ್ನು ಬಂಧಿಸಲಾಗಿದೆ.

Leave a Reply