ಭೋಪಾಲ್ ರೈಲು ನಿಲ್ದಾಣವು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಮಹಿಳೆಯರು ಮುಟ್ಟಿನ ವೇಳೆಯಲ್ಲಿ ಧರಿಸುವ ಸ್ಯಾನಿಟರಿ ಪ್ಯಾಡ್ ಯಂತ್ರವನ್ನು ಅಲ್ಲಿ ಅಳವಡಿಸಲಾಗಿದೆ. ಯಂತ್ರವನ್ನು ಜನವರಿ 1, 2018 ರಂದು ಸ್ಥಾಪಿಸಲಾಗಿದ್ದು ನಿಜಕ್ಕೂ ಉತ್ತಮ ಹೆಜ್ಜೆಯಾಗಿದೆ.

ಇತರ ರೈಲ್ವೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಂಜಲಿ ಠಾಕೂರ್ ಅವರು ಈ ಯಂತ್ರವನ್ನು ಉದ್ಘಾಟಿಸಿದರು. 5 ರೂಪಾಯಿಗೆ ಎರಡು ಪ್ಯಾಡ್ ಸಿಗುತ್ತದೆ. ಒಂದು ಬಾರಿಗೆ 75 ಪ್ಯಾಡ್ ಯಂತ್ರದಲ್ಲಿ ಇರುತ್ತದೆ. ಸ್ಥಳೀಯ ಸೇವಾ ಸಂಘಟನೆಯೊಂದು ಈ ಕೆಲಸಕ್ಕೆ ಮುಂದೆ ಬಂದಿದೆ.

ಒಂದು ವೇಳೆ ಪ್ಯಾಡ್ ಖಾಲಿಯಾದರೆ ಅದನ್ನು ಯಂತ್ರಕ್ಕೆ ತುಂಬುವ ವ್ಯವಸ್ಥೆ ಮಾಡಲಾಗಿದ್ದು, ಓರ್ವ ಮಹಿಳಾ ಸಿಬ್ಬಂದಿಗೆ ಇದರ ತರಬೇತಿ ನೀಡಲಾಗಿದೆ.
ಸ್ವಯಂಚಾಲಿತ ಯಂತ್ರವನ್ನು ಅನುಷ್ಠಾನಗೊಳಿಸಿದ ಒಂಭತ್ತು ಗಂಟೆಯಲ್ಲಿ 900 ಪ್ಯಾಡ್ ಖಾಲಿಯಾಗಿದ್ದು, ಇದರ ಬೇಡಿಕೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ರೈಲ್ವೇ ಅಧಿಕಾರಿಗಳ ಪ್ರಕಾರ, ಮೂರು ದಿನಗಳಲ್ಲಿ, ಸುಮಾರು 2,000 ಪ್ಯಾಡ್ ಯಂತ್ರದಿಂದ ಖರೀದಿ ಮಾಡಲಾಗಿದೆ..

Leave a Reply