ಬೆಂಗಳೂರು: ಬೆಂಗಳೂರಿನ ಬೋರ್ಡಿಂಗ್ ಶಾಲೆಯ ಕನಿಷ್ಠ 60 ವಿದ್ಯಾರ್ಥಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಕೋರೋಣ ಪಾಸಿಟಿವ್ ಪ್ರಕರಣದಲ್ಲಿ 60 ವಿದ್ಯಾರ್ಥಿಗಳ ಪೈಕಿ 14 ಮಂದಿ ತಮಿಳುನಾಡಿನವರು ಮತ್ತು ಉಳಿದವರು ರಾಜ್ಯದ ವಿವಿಧ ಭಾಗಗಳಿಂದ ಬಂದವರು.

ಬೆಂಗಳೂರು ನಗರ ಉಪ ಆಯುಕ್ತ ಜೆ.ಮಂಜುನಾಥ್, ” ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ಬೋರ್ಡಿಂಗ್ ಶಾಲೆಯಾಗಿದ್ದು, ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಅಲ್ಲಿದ್ದರು. ಶಾಲೆಗೆ ಬಂದಾಗ ಅವರಿಗೆ ಯಾವುದೇ ಲಕ್ಷಣಗಳಿರಲಿಲ್ಲ. ಭಾನುವಾರ ಸಂಜೆ ವಿದ್ಯಾರ್ಥಿಯೊಬ್ಬ ವಾಂತಿ ಮತ್ತು ಭೇದಿಯ ಬಗ್ಗೆ ದೂರು ನೀಡಿದ್ದಾನೆ. ನಾವು ತಕ್ಷಣ ಕಾರ್ಯಪ್ರವೃತ್ತರಾಗಿದ್ದೇವೆ. 480 ವಿದ್ಯಾರ್ಥಿಗಳಿದ್ದರು, ಎಲ್ಲರನ್ನು ಪರೀಕ್ಷಿಸಲಾಯಿತು. 60 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿದರು.

ಈ ಬಗ್ಗೆ ಯಾವುದೇ ಆತಂಕ ಗಾಬರಿ ಪಡಬೇಕಾಗಿಲ್ಲ. ಎಲ್ಲರನ್ನೂ ಮರು ಪರೀಕ್ಷೆ ಮಾಡಲಾಗುವುದು. ಅಕ್ಟೋಬರ್ 20 ರವರೆಗೆ ಶಾಲೆಯನ್ನು ಮುಚ್ಚಲಾಗುವುದು. ಇದು ಪೂರ್ವಭಾವಿ ಕ್ರಮವಾಗಿದೆ ಎಂದು ಅವರು ಹೇಳಿದರು.

Leave a Reply