ಬೆಂಗಳೂರು: ಕಲಾಸಿ ಪಾಳ್ಯದ ಕೈಲಾಸ್ ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ನಿನ್ನೆ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನಗೊಂಡಿರುವ ಘಟನೆ ವರದಿಯಾಗಿದೆ.

ನಿನ್ನೆ ಮಧ್ಯರಾತ್ರಿ ಎರಡುವರೆ ಗಂಟೆಯ ವೇಳೆ ಈ ಘಟನೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಲಿಕ ಸಂಬಂಧಿಯೂ ಸೇರಿ ಒಟ್ಟು ಐದು ಮಂದಿ‌ ನಿದ್ರೆಯಲ್ಲಿದ್ದ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆಯ ಕುರಿತು ಬಾರ್ ಮಾಲೀಕ ದಯಾನಂದ ಎನ್ನುವಾತನಿಗೆ ಕರೆ ಮಾಡಿದ್ರೆ ಆತ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿರುವುದಾಗಿ ಸಂಶಯ ವ್ಯಕ್ತವಾಗುತ್ತಿದೆ.‌

ಇನ್ನೂ ಅವಘಡದ ಬಗ್ಗೆ ತನಿಖೆ ನಡೆಸುತ್ತಿರುವ ಪೋಲಿಸರು ನಿಖರವಾದ ಕಾರಣವನ್ನು ನೀಡಲಿಲ್ಲ. ‌ಮೇಲ್ನೋಟಕ್ಕೆ ಮಧ್ಯ ತುಂಬಿದ ಬಾಟಲಿಗಳಿಗೆ ಶಾರ್ಟ್ ಸರ್ಕ್ಯೂಟ್ ಅಥವಾ ಸಿಗರೇಟು ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

Leave a Reply