ಮಂಗಳೂರು: ಕಾಟಿಪಳ್ಳದ‌ ದೀಪಕ್ ರಾವ್ ಹತ್ಯೆ ನಡೆದಂತೆ ರಾತ್ರಿ ಸಂಘಪರಿವಾರ ಕಾರ್ಯಕರ್ತರೆನ್ನಲಾದವರಿಂದ ತಲಾವಾರು ದಾಳಿಗೆ ಒಳಗಾದ ಎಂದು ಆರೋಪಿಸಲಾದ ಬಷೀರ್ 47 ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಜೀವ್ಮರಣ ಸ್ಥಿತಿಯಲ್ಲಿದ್ದ ಬಷೀರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗಿಡಾಗಿದ್ದಾರೆ.‌ ತಲೆಯ ಭಾಗಕ್ಕೆ ಬಲವಾದ ತಲಾವಾರು ಏಟು ಬಿದ್ದ ಕಾರಣ ಕಳೆದ ನಾಲ್ಕು ದಿನಗಳಿಂದ ಐಸಿಯುವಿನಲ್ಲಿದ್ದರು.

ಜನವರಿ ಮೂರಂದು ರಾತ್ರಿ 9:20 ಸುಮಾರಿಗೆ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್‌ ಫುಡ್ ಅಂಗಡಿಯನ್ನು ಮುಚ್ಚುವ ವೇಳೆಗೆ ಸಂಘಪರಿವಾರ ಕಾರ್ಯಕರ್ತರು ಎಂದು ಆರೋಪಿಸಲಾದ ನಾಲ್ವರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ನಗರದ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Leave a Reply