ಒಂದು‌ ಅಸಹಜವಾದ ಸಾವಾದರೂ ರಾಜಕಾರಣಿಗಳು ನಾಮುಂದು ತಾಮುಂದು ಎಂದು ರಾಜಕೀಯ ಮಾಡಲು ಪೈಪೋಟಿ ನಡೆಸುತ್ತಾರೆ. ಅಂಥದರಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ ವಿಷಯದಲ್ಲಿ ಸುಮ್ಮನೆ ಇರುತ್ತಾರೆಯೇ? ಮೃತ ದೀಪಕ್ ವಿಚಾರದಲ್ಲೂ ರಾಜ್ಯದ ಕೆಲ ರಾಜಕಾರಣಿಗಳು ಚೆನ್ನಾಗಿ ಬೇಳೆ ಬೇಯಿಸಿಕೊಂಡಿದ್ದಾರೆ ಇನ್ನು ಅದೇ ದಿನ ರಾತ್ರಿ ದುಷ್ಕರ್ಮಿಗಳ ಕೈಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ಇಂದು ಬೆಳಗ್ಗೆ ಕೊನೆಯುಸಿರೆಳೆದ ಬಶೀರ್ ಅವರ ಹೆಸರಿನಲ್ಲಿ ಗಲಭೆ ಎಬ್ಬಿಸಬೇಡಿ ಎಂದು ಬಶೀರ್ ಸಹೋದರ ಸಾರ್ವಜನಿಕವಾಗಿ ಮನವಿಯನ್ನು ಮಾಡಿದ್ದಾರೆ.

ಬಶೀರ್ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಕೊಂಡೊಯ್ಯುವ ವೇಳೆಯಲ್ಲಿ ಮಾತನಾಡಿದ ಅವರು ಮೃತರಾಗಿದ್ದು ನನ್ನ ಅಣ್ಣ ದಯವಿಟ್ಟು ಅವರ ಹೆಸರಿನಲ್ಲಿ ಯಾರು ಆಕ್ರೋಶವನ್ನು ವ್ಯಕ್ತಪಡಿಸದಿರಿ. ನಾವೆಲ್ಲರೂ ಕೂಡಿ ಬಾಳಬೇಕಾಗಿದೆ.‌ ಹಿಂದೂ ಮುಸ್ಲಿಮ್, ಕ್ರೈಸ್ತ, ಸಿಖ್, ದಲಿತ ಎನ್ನುವ ಭೇದಭಾವ ಮರೆತು ನಾವೆಲ್ಲರೂ ಶಾಂತಿಯಿಂದ ಇರಬೇಕು. ನಮ್ಮೆಲ್ಲರನ್ನು ಆ ದೇವನು ಕಾಪಾಡಲಿ ಎಂದು ಪ್ರಾರ್ಥನೆಯೊಂದಿಗೆ ಮನವಿಯನ್ನು ಮಾಡಿದರು.

Leave a Reply