ಭಾರತದಲ್ಲಿ ಕ್ರಿಕೆಟ್ ಪಂದ್ಯದ ಬಗ್ಗೆ ಕ್ರೇಜ್ ಇದ್ದರೆ ಫಿಲಿಪೈನ್ ನಲ್ಲಿ ಬಾಸ್ಕೆಟ್ ಬಾಲ್ ಬಗ್ಗೆ ಜನರಲ್ಲಿ ಹುಚ್ಚುತನವಿದೆ.
ಹಾಗೆಯೇ ಬಾಸ್ಕೆಟ್ ಬಾಲ್ ಜೊತೆಗೆ ಕೆಲವೊಮ್ಮೆ ಅವರು ವಿವಿಧ ಫನ್ ಗಳನ್ನೂ ಮಾಡುತ್ತಾರೆ. ಹೀಗೆ ಮಾಡಲು ಅವರಿಗೆ ಯಾವುದೇ ಕಾರಣಗಳೂ ಬೇಕಿಲ್ಲ.
ಝಂಬೋಂಗಾ ನಗರದಲ್ಲಿ, ಬಾಸ್ಕೆಟ್ ಬಾಲ್ ಆಟಗಾರರು ತಮ್ಮ ಸಾಮಾನ್ಯ ಜರ್ಸಿಯ ಬದಲು ಡೈಪರ್ಗಳನ್ನು ಧರಿಸಿ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹೀಗೆ ಆಟವಾಡುವಾಗ ಅವರು ತಮ್ಮ ಅಸಾಧಾರಣ ಶೂಟಿಂಗ್ ಮತ್ತು ರಕ್ಷಣಾ ಕೌಶಲ್ಯಗಳಲ್ಲಿ ರಾಜಿ ಮಾಡಲಿಲ್ಲ. ಕರ್ಟ್ ಜಸ್ಟಿನ್ ವಿಸೆಂಟೆ ಕುಡಾಲ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದು ಬಳಿಕ ಈ ಸುದ್ದಿ ವೈರಲ್ ಆಯಿತು.

Leave a Reply