ರಾಂಪುರ: ಪ್ರಧಾನಿ ನರೇಂದ್ರ ಮೋದಿ 500₹ ಹಾಗು 1,000₹ ನೋಟನ್ನು ಬ್ಯಾನ್ ಮಾಡಿದ್ದು ಇಡೀ ದೇಶದಲ್ಲೇ ಸಂಚಲನವನ್ನು ಮೂಡಿಸಿದ್ದು ಎಲ್ಲರಿಗೂ ತಿಳಿದೇ ಇರುವ ವಿಚಾರ. ಆದರೆ ಇಲ್ಲೊಂದು ವಿಚಿತ್ರವಾದ ಸಂಗತಿಯೊಂದು ನಡೆದಿದೆ.

ಮೋದಿ 500₹ ಹಾಗು 1,000₹ ನೋಟನ್ನು ನಿಷೇಧ ಮಾಡಿದ್ದಾರೆ ನಾವು ಕೂಡ ಹಾಗೆಯೇ ಮಾಡುತ್ತೇವೆ. ಇನ್ನುಮುಂದೆ ನಾವು ಒಂದು ರೂಪಾಯಿಯನ್ನು ನಿಷೇಧಿಸುತ್ತೇವೆ ಎಂದು ಉತ್ತರ ಪ್ರದೇಶದ ರಾಂಪುರದಲ್ಲಿ ಭಿಕ್ಷುಕರು ಹೇಳಿದ್ದಾರೆ.

ಹೊಸದಾಗಿ ಬಿಡುಗಡೆಗೊಂಡ ಒಂದು ರೂಪಾಯಿಯ ಕಾಯಿನ್ ಐವತ್ತು ಪೈಸೆಯಂತೆ ಕಾಣುತ್ತಿದೆ. ಇದನ್ನು ಯಾವುದೇ ಅಂಗಡಿಯವರು ಸ್ವೀಕರಿಸುವುದಿಲ್ಲ, ಕೆಲವೊಬ್ಬರು ಐವತ್ತು ಪೈಸೆಯ ಬೆಲೆಯನ್ನು ನೀಡುತ್ತಾರೆ ಹೀಗಾಗಿ ಭಿಕ್ಷುಕರೆಲ್ಲ ಒಂದೆಡೆ ಕೂತು ಚರ್ಚಿಸಿದ್ದೇವೆ ಎಂದು ಭಿಕ್ಷುಕರು ಹೇಳುತ್ತಾ ಹೋಗಿದ್ದಾರೆ.

Leave a Reply