ಕೇವಲ ನೂರು ರೂಪಾಯಿಗಾಗಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಮೊಬೈಲ್ ಲುಡೋ ಆಟವಾಡಿ ಸೋಲಿಸಿದ ಬಳಿಕ 100 ಕೊಡದ್ದಕ್ಕಾಗಿ 32 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ 4 ಜನರನ್ನು ಬಂಧಿಸಲಾಯಿತು.

ಮೃತನ ಮೇಲೆ ಕೊಲೆ ಆರೋಪಿ ಶಸ್ತ್ರಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇವರು ನಿಯಮಿತ ವಾಗಿ ಚಾಲೆಂಜ್ ಗಾಗಿ ಲೂಡೋ ಗೇಂ ಆಡುತ್ತಿದ್ದರು ಎನ್ನಲಾಗಿದೆ.


ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ ಶುಕ್ರವಾರ ರಾತ್ರಿ 10.30 ರ ವೇಳೆಗೆ ಇಲಿಯಾಸ್ ನಗರದ ಎಚ್.ಟಿ ಲೈನ್ ರಸ್ತೆಯ ಘಟನೆ ಬಳಿ ಈ ನಡೆದಿದೆ.

ಶೇಖ್ ಮಿಲನ್ ಮೃತ ದುರ್ದೈವಿ. ಆತ ಶುಕ್ರವಾರ ರಾತ್ರಿ 8 ಗಂಟೆಗೆ ಮನೆಯಿಂದ ತೆರಳಿದ್ದು, ರಾತ್ರಿ 11 ರ ತನಕ ಹಿಂತಿರುಗಲಿಲ್ಲ. ಆತನನ್ನು ತಲೆ ಗಾಯಗಳಿಂದಾಗಿ ಜಯನಗರ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ ಎಂದು ಸ್ನೇಹಿತರು ಮಿಲನನ ಪತ್ನಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ ಶೇಖ್ ಮಿಲನ್ ಕೊನೆಯುಸಿರೆಳೆದರು.

Leave a Reply