ಬಳ್ಳಾರಿ: ಬೈಕ್ ಸವಾರನೊರ್ವನಿಗೆ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದು ಪರಿಣಾಮ ಸವಾರ ರಸ್ತೆಯಲ್ಲೇ ಬಿದ್ದು ಗಂಟೆಗಳ ಕಾಲ ಸಹಾಯಕ್ಕಾಗಿ ನರಳಾಡಿದ ಘಟನೆ ಹೂವಿನಹಡಗಲಿ ತಾಲೂಕಿನ ತಿಮ್ಮಾಪುರದಲ್ಲಿ ನಡೆದಿದೆ.

ಟಿ.ಎಂ. ನಾಗರಾಜ್ ಎನ್ನುವಾತ‌ ಬೈಕ್‌ನಲ್ಲಿ‌‌‌ ಹೋಗುತ್ತಿದ್ದಾಗ ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿ ನೆಳಕ್ಕುರುಳಿದ್ದು ಮೊಣಕಾಲಿಗೆ ತೀವ್ರ ಗಾಯವಾಗಿ ಸಹಾಯಕ್ಕಾಗಿ ಮನವಿ ಮಾಡಿದ್ದರು ಯಾರೂ ಅತ್ತ ಸುಳಿಯದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ಒಂದು ಗಂಟೆಯ ಕಾಲ ರಸ್ತೆಯಲ್ಲೇ ನರಳುತ್ತಿದ್ದ ನಾಗರಾಜ್ ‌‌ಕೊನೆಗೆ ಸ್ವತ ಮೊಬೈಲ್ ಮೂಲಕ ಮನೆಯರಿಗೆ ವಿಷಯ ತಿಳಿಸಿ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಾದರು. ಘಟನೆಗೆ ಸಂಬಂಧಿಸಿದಂತೆ ಹೂವಿನ ಹಡಗಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply