ರಾಜಧಾನಿ ಭೋಪಾಲ್‍ನ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಭಾನುವಾರ ಪ್ರಚಾರ ನಡೆಯುತ್ತಿದ್ದ ವೇಳೆ ಈ ಚುನಾವಣಾ ಪ್ರಚಾರಕ್ಕೆಂದು ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾರಿಗೆ ಚಪ್ಪಲಿ ಹಾರ ಹಾಕಲಾಗಿದೆ.

ವಿಡಿಯೋದಲ್ಲಿ ಕಾಣುವಂತೆ ಮನೆಮನೆಗೆ ಮತ ಯಾಚಿಸಲು ಹೋದ ಸಂದರ್ಭದಲ್ಲಿ ವಯೋವೃದ್ಧರೋರ್ವರು ಅವರಿಗೆ ಚಪ್ಪಲಿ ಹಾರ ಹಿಡಿದು ಮುಂದು ಬರುತ್ತಿದ್ದರು. ದಿನೇಶ್ ಶರ್ಮಾ ಮೊದಲಿಗೆ ಹಿಂದೆ ಸರಿದರು‌. ನಂತರ ತಾನೇ ಮುಂದೆ ಬಂದು ಚಪ್ಪಲಿ ಹಾರ ಹಾಕಿಸಿಕೊಂಡರು.

ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದ್ದು ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಆದರೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ.

ನಾನವರ ಮಗ ಇದ್ದಂತೆ. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನ ಆಗಿದೆ. ನಾನು ಮಾತಾಡಿ ಸರಿಪಡಿಸುತ್ತೇನೆ ಎಂದು ಬಿಜೆಪಿ ನಾಯಕ ಶರ್ಮಾ ಹೇಳಿದ್ದಾರೆ.

ವೀಡಿಯೋ ಕ್ರಪೆ : ಎಎನ್ಐ ನ್ಯೂಸ್

Leave a Reply