ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೊನ್ನೆ ತಾನೇ ತಮಿಳುನಾಡು ಶಾಸಕರೊಬ್ಬರು ಕಾದು ಸುಸ್ತಾಗಿದ್ದ ಪ್ರಯಾಣಿಕರರನ್ನು ತಾನೇ ಸ್ವತಃ ಬಸ್ ಚಲಾಯಿಸಿ ಸಹಕರಿಸಿದ್ದರು. ಮಾಧ್ಯಮದಲ್ಲಿ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಲಾಗಿತ್ತು.

ಈಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ತಮಿಳುನಾಡಿನ ಬಸ್ ಚಾಲಕ ಪ್ರಯಾಣಿಕರ ನೆರವಿಗೆ ಬಂದಿದ್ದಾರೆ.
ಬಸ್ ತೆಗೆದು ರಸ್ತೆಗೆ ಇಳಿದಿದ್ದಾರೆ. ಪ್ರಯಾಣಿಕರು ಓಯಸಿಸ್ ನಲ್ಲಿ ನೀರು ಕಂಡಂತೆ ಬೇಗ ಬೇಗ ಬಸ್ ಹತ್ತಿದ್ದಾರೆ. ಆದರೆ ಬಸ್ಸಿನಲ್ಲಿ ಡ್ರೈವರ್ ಸೀಟಿನಲ್ಲಿದ್ದ ಡೈವರ್ ಮುಖ ಕಾಣುತ್ತಿಲ್ಲ. ಯಾಕೆಂದರೆ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರು.

ಈ ಬಗ್ಗೆ ಪ್ರಯಾಣಿಕರೊಬ್ಬರು ವಿಚಾರಿಸಿದಾಗ, ಸರಕಾರಿ ಬಸ್ ನೌಕರರ ಪ್ರತಿಭಟನೆ ನಡೆಯುತ್ತಿದೆಯಲ್ವಾ, ನಾನೊಬ್ಬ ಕೆಲಸ ಮಾಡುತ್ತಿದ್ದೇನೆ. ಇನ್ನು ನನ್ನ ಗುರುತು ಹಿಡಿದು ನನ್ನನ್ನು ಟಾರ್ಗೆಟ್ ಮಾಡುವುದು ಬೇಡ ಎಂದು ಉತ್ತರ ಕೊಟ್ಟಿದ್ದಾರೆ.

ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ. ಆದರೆ ಇಂದಿನ ಪ್ರತಿಭಟನೆಯ ಬಸ್ ಗೆ ಕಲ್ಲು ಹೊಡೆಯುವ ಕಾಲದಲ್ಲಿ ಡ್ರೈವರ್ ಹೆಲ್ಮೆಟ್ ರಡಿ ಇಡುವುದು ಒಳ್ಳೆಯದೇ..

Leave a Reply