ಮಲೇಷ್ಯಾ : ಇದು ಮದರ್ಸ್ ಡೇ – ಅಮ್ಮ ತೀರಿಕೊಂಡರೂ ಅಮ್ಮನನ್ನು ಫೋಟೋ ಮೂಲಕ ಜೀವಂತಗೊಳಿಸಿದ ಘಟನೆಯೊಂದು ವರದಿಯಾಗಿದೆ. ತಂತ್ರಜ್ಞಾನದ ಸಹಾಯದಿಂದ ಮಲೇಷ್ಯಾದ ಫೋಟೋಗ್ರಾಫರ್ ತಾಯಿಗೆ ಮರು ಜೀವ ನೀಡಿದ್ದಾರೆ. ಜಾರಾ ಹಲೀನಾ , ಮಹಿಳಾ ಫೋಟೋಗ್ರಾಫರ್ ಮಕ್ಕಳ ತಾಯಿ ತೀರಿಕೊಂಡರೂ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.  ಮಲೇಷ್ಯಾದ ಆಯಡ್ಲಿನಗ್ ನೆಲ್ಡಾ ತನ್ನ ನಾಲ್ಕನೇ ಹೆರಿಗೆಯ ವೇಳೆ ಸಾವನ್ನಪ್ಪಿದ್ದು, ಅವರು ಗರ್ಭಿಣಿಯಾಗಿದ್ದಾಗ ತನಗೆ ಫ್ಯಾಮಿಲಿ ಫೋಟೋ ಶೂಟ್ ಮಾಡಬೇಕು ಎಂದು ಕನಸು ಕಂಡಿದ್ದರು.

ಅದಕ್ಕಾಗಿ ಫೋಟೋಗ್ರಾಫರ್ ಜೊತೆ ಮಾತುಕತೆ ನಡೆಸಿ ಡೇಟ್ ಫಿಕ್ಸ್ ಮಾಡಿದ್ದರು. ಆದರೆ ವಿಧಿಯೇ ಬೇರೆಯಾಗಿತ್ತು. ಆಕೆ ಸಾವನ್ನಪ್ಪಿದರೆ ಮಗು ಆರೋಗ್ಯವಾಗಿತ್ತು. ಆಕೆಯ ಸಾವಿನಿಂದಾಗಿ ಈ ಫ್ಯಾಮಿಲಿ ಫೋಟೋ ಕ್ಲಿಕ್ಕಿಸುವ ಯೋಜನೆಯೂ ಕೊನೆಗೊಂಡಿತು. ಹೌದು ತನ್ನ ಪತ್ನಿ ಮತ್ತು ಮಕ್ಕಳ ಅಮ್ಮ ಇಲ್ಲದ ಮೇಲೆ ಫೋಟೋ ಯಾರಿಗಾಗಿ ತೆಗೆಯುವುದು. ಆದರೆ ಫೋಟೋಗ್ರಾಫರ್ ಈ ಬಗ್ಗೆ ಖೇದ ವ್ಯಕ್ತ ಪಡಿಸುತ್ತಲೇ ಇದ್ದಳು.

ಕೊನೆಗೆ ಅವಳಿಗೆ ಒಂದು ಉಪಾಯ ಹೊಳೆಯಿತು. ಆಕೆಯ ಸಾವಿನ ಐದು ತಿಂಗಳ ಬಳಿಕ ಆಕೆಯನ್ನು ತಂತ್ರಜ್ಞಾನದ ಮೂಲಕ ಜೀವಂತಗೊಳಿಸಿ ಫೋಟೋ ಶೂಟ್ ಮಾಡಿದಳು. ಫೋಟೋದಲ್ಲಿ ಗಂಡ ಮತ್ತು ಮಕ್ಕಳ ಜೊತೆ ಆಯಡ್ಲಿನಗ್ ನೆಲ್ಡಾ ಖುಷಿಯಾರುವುದನ್ನು ನೀವು ನೋಡಬಹುದು.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಿಗರ ಮನಗೆದ್ದಿದ್ದು, ಎಲ್ಲರೂ ಈ ಹೊಸ ಪ್ರಯತ್ನ ಮಾಡಿದ ಫೋಟೋಗ್ರಾಫರ್ ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Leave a Reply