ತೃಶೂರ್: ಕೇರಳದ ತ್ರಿಶೂರ್ ಚಾವಕ್ಕಾಡ್ ಎಂಬಲ್ಲಿ ಬಸ್‍ಸ್ಟಾಪ್‍ನೊಳಗೆ ಕಾರು ನುಗ್ಗಿದ ಪರಿಣಾಮ ಇಬ್ಬರು ಬಾಲಕರು ಸಾವಿಗೀಡಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಬಸ್ ಸ್ಟಾಪಿಗೆ ನುಗ್ಗಿತ್ತು. ತಾಯಿಯೊಂದಿಗೆ ಬಸ್ ಕಾಯುತ್ತ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಕೂಡ ಮೃತಪಟ್ಟಿದ್ದಾನೆ.ಅಪಘಾತ ಚಾವಕ್ಕಾಡ್ ವಿಶ್ವನಾಥ ದೇವಸ್ಥಾನದ ಮುಂಭಾಗದಲ್ಲಿ ಘಟನೆಡೆದಿದ್ದು ಇನ್ನೋವಾ ಕಾರು ಚಾಲಕ ನಿಯಂತ್ರಣಕಳಕೊಂಡು ಬಸ್‍ಸ್ಟಾಪಿಗೆ ನುಗ್ಗಿತ್ತು..

ಬಸ್‍ಸ್ಟಾಪಿನಲ್ಲಿ ಬಸ್ಸಿಗೆ ಕಾಯುತ್ತಿದ್ದ ಅಮಲ್ ಎನ್ನುವಬಾಲಕ ಮೃತಪಟ್ಟರೆ, ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನೊಳಗಿದ್ದ ಅದಿಲ್ ಎನ್ನುವ ಬಾಲಕ ಮೃತಪಟ್ಟಿದ್ದಾನೆ.ಕಾರಿನಲ್ಲಿ ಒಟ್ಟು ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಗುರುವಾಯೂರಿನ ಬೇರೆಬೇರೆ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

Leave a Reply