ತಂದೆ ಪೊಲೀಸ್ ಅಧಿಕಾರಿ, ಡ್ಯೂಟಿಗೆ ತೆರಳಲು ರೆಡಿಯಾಗಿದ್ದಾರೆ. ಆದರೆ ಅವರ ಮಗ ಅಳುತ್ತಿದ್ದಾನೆ. ತಂದೆಯನ್ನು ಹೋಗಲು ಬಿಡುತ್ತಿಲ್ಲ. ಈ ವೀಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದ್ದು, ಅರುಣ್ ಬೋಥ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. “ಇದು ಪೊಲೀಸ್ ಕೆಲಸದ ಅತ್ಯಂತ ಕಷ್ಟದ ಭಾಗವಾಗಿದೆ. ಸಮಯ ನಿಗದಿಯಿಲ್ಲದ ಹೆಚ್ಚಿನ ಸಮಯದ ಕರ್ತವ್ಯದಿಂದಾಗಿ ಪೊಲೀಸರು ತಮ್ಮ ಕೌಟುಂಬಿಕ ಜೀವನದಲ್ಲಿ ಈ ಕಷ್ಟ ಎದುರಿಸ ಬೇಕಾಗುತ್ತದೆ” ಎಂದು ಅರುಣ್ ಬೋಥ್ರಾ ತಮ್ಮ ವೀಡಿಯೋ ಶೀರ್ಷಿಕೆಯಲ್ಲಿ ಪೊಲೀಸರ ಕೌಟುಂಬಿಕ ಜೀವನದ ಕಷ್ಟವನ್ನು ತೋಡಿಕೊಂಡಿದ್ದಾರೆ. ವೀಡಿಯೋದಲ್ಲಿ ತಂದೆ ಮಗನನ್ನು ಸಮಾಧಾನಿಸುತ್ತಿರುವುದು ಕಾಣುತ್ತಿದೆ. ನಾನು ಬೇಗ ಬರುವೆ. ಸ್ವಲ್ಪ ಸಮಯಕ್ಕಷ್ಟೇ ಹೋಗುತ್ತಿದ್ದೇನೆ ಎಂದು ಮಗನನ್ನು ಸಮಾಧಾನಿಸುತ್ತಿದ್ದಾರೆ. ಆದರೆ ಏನೇ ಆದರೂ ಮಗ ತಂದೆಯನ್ನು ಹೋಗಲು ಬಿಡುತ್ತಿಲ್ಲ. ಈ ಭಾವನಾತ್ಮಕ ವೀಡಿಯೋವನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ.
This is the toughest part of the police job. Due to long and erratic duty hours most of the police officers have to face this situation.
Do watch. pic.twitter.com/aDOVpVZ879
— Arun Bothra (@arunbothra) April 28, 2019