ಹೊಸದಿಲ್ಲಿ : ಇಲ್ಲಿಗೆ ಸಮೀಪದ ಗೋವಿಂದ್ ಪುರಿ ಎಂಬಲ್ಲಿ ಮನೆಯ ಮುಂಭಾಗದಲ್ಲಿ ಮೂತ್ರ ಹೊಯ್ದದನ್ನು ಪ್ರಶ್ನಿಸಿದ ವ್ಯಕ್ತಿಗೆ ಕಬ್ಬಿಣದ ರಾಡ್‌ನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ರವಿವಾರ ರಾತ್ರೆ ಪವರ್ ಕಟ್ ಆದ ಸಮಯದಲ್ಲಿ ಲಿಲು ಮತ್ತು ಪತ್ನಿ ಪಿಂಕಿ ಮನೆಯ ಹೊರಗೆ ಇದ್ದಾಗ 65 ವರ್ಷದ ಮುದುಕ ಇವರ ಮನೆಯ ಮುಂಭಾಗದ ಬೀದಿಯ ಬದಿಯಲ್ಲಿ ಮೂತ್ರ ವಿಸರ್ಜಿಸಿದ್ದಾನೆ. ಇದನ್ನು ಕಂಡ ಲಿಲು ಮೂತ್ರ ಹೊಯ್ದದ್ದೇಕೆಂದು ಕೇಳಿ ಮುದುಕನನ್ನು ಜೋರು ಮಾಡಿದ್ದಾನೆ.

ಇದಾದ ಕೂಡಲೇ ಮುದುಕನ ಇಬ್ಬರು ಮಕ್ಕಳು ನಮ್ಮ ತಂದೆಗೆ ಹೊಡೆದಿದ್ದೀಯಾ ಎನ್ನುತ್ತಾ ಲಿಲುನ ಮೇಲೆ ಹಲ್ಲೆ ಮಾಡಿದರು. ಕಬ್ಬಿಣದ ರಾಡಿನಿಂದ ಹೊಡೆದರು. ಸಿಮೆಂಟಿನ ಸ್ಲಾಬ್‌ನಲ್ಲಿ ತಲೆಗೆ ಜಜ್ಜಿದರು.
ಲಿಲು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮುದುಕನ ಇಬ್ಬರು ಮಕ್ಕಳನ್ನು ಪೊಲೀಸರು ಕೊಲೆ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

Leave a Reply