ಭಾರತ ಹಾಗೂ ಚೀನಾದ ಆಂತರಿಕ ಗಡಿ ವ್ಯವಹಾರಗಳ ಸಭೆಯಲ್ಲಿ ಅರುಣಾಚಲ ಪ್ರದೇಶದ ಲೈನ್ ಆಫ್ ಆ್ಯಕ್ಚುಅಲ್ ಕಂಟ್ರೋಲ್(ಎಲ್ ಎಸಿ) ಗಡಿಯಲ್ಲಿ ರಸ್ತೆ ನಿರ್ಮಾಣವನ್ನು ನಿಲ್ಲಿಸಲು ಚೀನಾ ಸಮ್ಮತಿಯನ್ನು ಸೂಚಿಸಿದೆ.

ಸಾಂದರ್ಭಿಕ ಚಿತ್ರ

ಈ ಸಂದರ್ಭದಲ್ಲಿ ಭಾರತವು ವಶದಲ್ಲಿರಿಸಿಕೊಂಡಿದ್ದ ಸಾಮಗ್ರಿಗಳನ್ನು ಚೀನಾಕ್ಕೆ ಹಸ್ತಾಂತರಿಸಿತು.

ಕಳೆದ ತಿಂಗಳು ಅರುಣಾಚಲದ ಗಡಿಭಾಗದಲ್ಲಿ ಕೈಗೊಳ್ಳತ್ತಿದ್ದ ರಸ್ತೆ ನಿರ್ಮಾಣ ಕಾರ್ಯವನ್ನು ಪತ್ತೆ ಹಚ್ಚಿದ ಭಾರತವು ಎರಡು ಎಸ್ಕವೇಟರ್ ಗಳು ಸೇರಿದಂತೆ ಇತರೆ ನಿರ್ಮಾಣ ವಸ್ತುಗಳನ್ನು ಚೀನಾ ಕಾರ್ಮಿಕರಿಂದ ವಶಕ್ಕೆ ತೆಗದುಕೊಂಡಿತ್ತು.
ಭಾರತ ಮತ್ತು ಚೀನಾದ ಮಧ್ಯೆ ಆಗಾಗ ಗಡಿವಿವಾದ ನಡೆಯುತ್ತಾ ಇರುತ್ತದೆ.

Leave a Reply