ಮಂಗಳೂರಿನಲ್ಲಿ ಮುಸ್ಲಿಂ ಯುವಕ ಮೃತಪಟ್ಟಿದ್ದು ಇದಕ್ಕೆ ಯಾಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ. ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ‌.

ಬಶೀರ್ ಹತ್ಯೆ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಅವರು ಮಾತನಾಡುತ್ತಿದ್ದರು.

ಯಾರೂ ಕೂಡ ಸಮಾಜದಲ್ಲಿ ಶವವನ್ನು ಮುಂದಿಟ್ಟು ರಾಜಕಾರಣ ಮಾಡಬಾರದು. ಸಾಧ್ಯವಾದರೆ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಧಾರ್ಮಿಕ ಭಾವನೆಗಳನ್ನು ಕೆರಳಿ ಸಮಾಜದ ಸಾಮರಸ್ಯ ಹಾಳುಮಾಡಿ ಹಾನಿಯನ್ನು ಮಾಡಬಾರದು. ಬಶೀರ್ ಹತ್ಯೆಗೆ ಬಿಜೆಪಿ ಏಕೆ ಬೀದಿಗಿಳಿದಿಲ್ಲ ಎಂದು ಪ್ರಶ್ನಿಸಿದ್ದಾರೆ.

Leave a Reply