ಸಿಎಂ ಆದಿತ್ಯನಾಥ್ ರವರನ್ನು ಸ್ವಾಗತಿಸುತ್ತೇನೆ. ಅವರು ನಮ್ಮ ರಾಜ್ಯದಲ್ಲಿ ಸಂಚರಿಸಿ ಇಂದಿರಾ ಕ್ಯಾಂಟೀನ್ ಮತ್ತು ರೇಶನ್ ಅಂಗಡಿಗೆ ಭೇಟಿಕೊಡಲಿ. ಅವರ ರಾಜ್ಯದಲ್ಲಿ ಹಸಿವಿನಿಂದ ಸಾಯುವ ಕೆಲವು ವರದಿಗಳು ಬರುತ್ತದೆ. ಇದು ಅವರಿಗೆ ಸಹಾಯವಾಗುವುದು. ಅವರಿಂದ ನಮಗೆ ಕಲಿಯುವಂತಹದ್ದು ಏನೂ ಇಲ್ಲ. ಮೊದಲು ಅವರು ತಮ್ಮ ರಾಜ್ಯವನ್ನು ಜಂಗಲ್ ರಾಜ್ ನಿಂದ ಸರಿ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಕರ್ನಾಟಕ ಭೇಟಿಯಲ್ಲಿದ್ದು, ಪರಿವರ್ತನಾ ಸಮಾವೇಶದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಮುಖ್ಯ ಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಸಿಎಂ ಖಡಕ್ಕಾಗಿ ಟ್ವೀಟ್ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್ ರವರು ಬೆಂಗಳೂರಿಗೆ ಬಂದಿದ್ದೇ ತಡ, ಹಿಂದೂ ದ್ವೇಷ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧಾರ್ಮಿಕತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇನ್ನೆರಡು ಬಾರಿ ಯೋಗಿ ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯ ಅವರು ನವರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟ್ವೀಟ್ ಮಾಡಿದ್ದರು ಮತ್ತು ಯೋಗಿಯವರು ತನ್ನ ಭಾಷಣದಲ್ಲಿ ಹಿಂದೂ ಧರ್ಮದ ವ್ಯಾಖ್ಯಾನವನ್ನು ಹೇಳಿಕೆ ನೀಡಿದ್ದರು.

ಧಾರ್ಮಿಕನಾಗುವುದು ಎಂದರೆ ನಮ್ಮ ಧರ್ಮ ಪಾಲನೆ ಮಾಡುವುದು. ಕೋಮುವಾದಿ ಆಗುವುದೆಂದರೆ ಅನ್ಯ ಧರ್ಮವನ್ನು ದ್ವೇಷಿಸುವುದು. ನಾವು ಧಾರ್ಮಿಕವಾಗಬೇಕೇ ಹೊರತು ಕೋಮುವಾದಿಗಳಾಗಬಾರದು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

Leave a Reply