ಹೊಸದಿಲ್ಲಿ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿವಾದಿತ ಹೇಳಿಕೆ ನೀಡಿದ ಸುದ್ದಿಯಾದ ಆಮ್ ಅದ್ಮಿ ಪಾರ್ಟಿಯ ನವೀನ್ ಜೈಹಿಂದ್‍ಗೆ ತಮ್ಮ ಕೋಪವನ್ನು ನಿಯಂತ್ರಿಸಿ ಮಾತಾಡುವಂತೆ ಪತ್ನಿ ಹಾಗೂ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಸೂಚಿಸಿದ್ದಾರೆ.

ಹರಿಯಾಣ ಸರಕಾರ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ನೀಡಿದ ನಷ್ಟಪರಿಹಾರ ಕಡಿಮೆಯಾಗಿದ ಎಂಬ ಕೋಪದಲ್ಲಿ ನವೀನ್ ಜೈಹಿಂದ್‍ರು ‘ಬಿಜೆಪಿ ನಾಯಕರಲ್ಲಿ ಯಾರಾದರೂ ಸಾಮೂಹಿಕ ಅತ್ಯಾಚಾರಕ್ಕೊಳಗಾದರೆ ತಾನು 20 ಲಕ್ಷ ರೂಪಾಯಿ ನಷ್ಟಪರಿಹಾರ ಕೊಡುತ್ತೇನೆಂದು’ ಘೋಷಿಸಿದ್ದರು.

ನವೀನ್‍ರ ಹೇಳಿಕೆಯನ್ನು ಸ್ವಾತಿ ಮಲಿವಾಲ್ ಖಂಡಿಸಿದ್ದಾರೆ.ಆಲೋಚಿಸಿ ಮಾತಾಡಬೇಕು ಎಂದುಪತಿಗೆ ಹೇಳಿದ್ದಾರೆ. ನವೀನ್‍ರ ಕೋಪ ಮತ್ತು ನೋವು ನನಗೆ ಅರ್ಥವಾಗುತ್ತದೆ. ಆದರೆ ಕೋಪ ವ್ಯಕ್ತಪಡಿಸಲು ಹೋಗುವಾಗ ಎಚ್ಚರ ವಹಿಸಿ ಮಾತಾಡಬೇಕು ಎಂದು ಸ್ವಾತಿ ಹೇಳಿದರು.

ಹರಿಯಾಣದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿಗೆ ಹರಿಯಾಣ ಸರಕಾರ 2ಲಕ್ಷರೂಪಾಯಿ ನಷ್ಟಪರಿಹಾರ ನೀಡಿತ್ತು. ಮಹಿಳೆಯರ ಮಾನಕ್ಕೆ ಎರಡು ಲಕ್ಷರೂಪಾಯಿ ಬೆಲೆಯೇ ಎಂದು ನವೀನ್ ಪ್ರಶ್ನಿಸಿದ್ದಾರೆ. ಯಾವುದೇ ಬಿಜೆಪಿ ನಾಯಕರನ್ನು ಅತ್ಯಾಚಾರ ಮಾಡಿದರೆ ನಷ್ಟಪರಿಹಾರವಾಗಿ ತಾನು 20 ಲಕ್ಷ ರೂಪಾಯಿ ಕೊಡತ್ತೇನೆ ಎಂದು ನವೀನ್ ಹೇಳಿದ್ದು ವಿವಾದವಾಗಿದೆ.

Leave a Reply