ಲಕ್ನೋ: ಗೋವು ಮತ್ತು ಇತರ ಪ್ರಾಣಿಗಳ ಸರ್ವೆ ನಡೆಸಲು ಯೋಗಿ ಸರಕಾರ ಮುಂದಾಗಿದ್ದು, ನಿನ್ನೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಗೋವುಗಳ ಎಣಿಕೆಯ ಸಮೀಕ್ಷೆಗಾಗಿ ಯೋಗಿ ಸರ್ಕಾರ ಒಟ್ಟು 7.86 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಗೋವುಗಳ ಸರ್ವೆ ಜೊತೆ ಜೊತೆಯಲ್ಲಿ ಎಮ್ಮೆ, ಹಂದಿ, ಮೇಕೆ ಮತ್ತು ಕುರಿಗಳ ಎಣಿಕೆ ಕಾರ್ಯ ನಡೆಯಲಿದೆ.

2012 ರಲ್ಲಿ ಜನಸಂಖ್ಯೆ ಸರ್ವೆ ಪ್ರಕಾರ 205.66 ಲಕ್ಷ ಗೋವುಗಳು, ಎಮ್ಮೆ ಸುಮಾರು 306.25 ಲಕ್ಷ, 155.86 ಲಕ್ಷ ಕುರಿ ,ಆಡುಗಳು ಮತ್ತು 13.34 ಲಕ್ಷ ಹಂದಿಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ನಿಖರವಾಗಿ ಸಂಖ್ಯೆ ತಿಳಿಯಲು ಈ ಸರ್ವೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Leave a Reply