1,400 ವರ್ಷಗಳ ಹಿಂದೆ ಚೈನಾದ ಜನರು ಪಟಾಕಿಯನ್ನು ಕಂಡುಹಿಡಿದರು. ಯುದ್ಧದಲ್ಲಿ ಬಳಸಲಾಗುವ ರಾಕೆಟ್‍ಗಳು ಮತ್ತು ಬಾಂಬುಗಳನ್ನು ಸಿಡಿಸುವಿಕೆಗೆ ಗನ್ ಪೌಂಡರ್ ಅನ್ನು ಬಳಸಲಾಗುತ್ತದೆ. ಇದೇ ಗನ್ ಪೌಂಡರ್‍ಗಳಿಂದ ಪಟಾಕಿಗಳನ್ನು ತಯಾರಿಸಲಾಗುತ್ತದೆ. ಆದರೆ ಪಟಾಕಿಗಳಲ್ಲಿ ಕೆಲವೊಂದು ರಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಅವುಗಳು ಸಿಡಿದಾಗ ವಿಭಿನ್ನ ಬಣ್ಣವನ್ನು ಪಡೆಯುತ್ತವೆ. ಗನ್ ಪೌಡರ್‍ಗೆ ಇದ್ದಿಲನ್ನು ಸೇರಿಸಿದಾಗ ಅವುಗಳು ಮಿಂಚುಳ್ಳಿಯಾಗಿ ಮಿನುಗುವಿಕೆಯನ್ನುಂಟು ಮಾಡುತ್ತವೆ. ಕೇವಲ ಶಬ್ಧವನ್ನುಂಟು ಮಾಡುವವುಗಳನ್ನು ಪಟಾಕಿಗಳೆಂದು ಕರೆಯುತ್ತಾರೆ. ಇಂದು ಪಟಾಕಿಗಳನ್ನು ಅಪಾಯದ ಸೂಚನೆಗೆ, ಹಡಗುಗಳಲ್ಲಿ ಸಹಾಯಕ್ಕಾಗಿ ಇತರರನ್ನು ಕರೆಯಲು, ವಿಮಾನಗಳನ್ನು ನಿಲ್ಲಿಸುವ ಸೂಚಕವಾಗಿ ಮತ್ತು ಇತರ ಸಮಾರಂಭ, ಸಂಭ್ರಮಗಳಲ್ಲಿ ಬಳಸಲಾಗುತ್ತದೆ.

Leave a Reply