ಲೇಖಕರು: ಡಾ.ಪಿ.ವಿ ಭಂಡಾರಿ

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಸೆಪ್ಟೆಂಬರ್ ಹತ್ತು.ಇದರ ಬಗ್ಗೆ ಯೋಚನೆ ಮಾಡುತ್ತಿದ್ದಾಗ ನನಗೆ ಹೊಳೆದದ್ದು ವಿದ್ಯುತ್ ಕಂಪನ ಚಿಕಿತ್ಸೆ.ಬಹುಶಃ ಮನೋ ವೈದ್ಯನಾಗಿ ನಾನು ಆತ್ಮಹತ್ಯೆ ತಡೆಯ ಬಗ್ಗೆ ಏನಾದರೂ ಮಾಡಬಹುದು ಎಂದರೆ ಮುಖ್ಯವಾದದ್ದು ಇದು.ವಿದ್ಯುತ್ ಕಂಪನ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವುದು.ನಾನು ನನ್ನ ಪ್ರಾಕ್ಟೀಸ್ ಶುರು ಮಾಡಿದ ಮೊದಲ ಐದಾರು ವರ್ಷ ಇದರ ಉಪಯೋಗವನ್ನು ಸರಿಯಾಗಿ ಮಾಡಲೇ ಇಲ್ಲ.ಇದಕ್ಕೆ ಮುಖ್ಯ ಕಾರಣ ಇದರ ಉಪಯೋಗದ ಬಗ್ಗೆ ಹಾಗೂ ಇದರ ಅಡ್ಡ ಪರಿಣಾಮಗಳ ಬಗ್ಗೆ ನನ್ನಲ್ಲಿ ಬಹಳಷ್ಟು ಸಂಶಯಗಳು ಇದ್ದವು.ಆದರೆ ಒಮ್ಮೆ ಬಳಸಲು ಶುರು ಮಾಡಿದ ಮೇಲೆ ನನಗೆ ಇದರ ಉಪಯೋಗ ಗೊತ್ತಾಯಿತು.ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡುವ ರೋಗಿಗೆ ಅದನ್ನು ಯಾವುದೇ ಕೌನ್ಸೆಲಿಂಗ್ ಮೂಲಕ ಕಡಿಮೆ ಮಾಡಲು ಆಗದೇ ಇರುವಾಗ.ಮನೋವೈದ್ಯರ ಪಾಲಿಗೆ ಇದೊಂದು ಸಂಜೀವಿನಿ ಇದ್ದ ಹಾಗೆ ಇದರ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಮನೋವೈದ್ಯರಿಂದ ಹಿಡಿದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಅವರ ಕುಟುಂಬದವರು ಇವರಲ್ಲಿ ಇವೆ .

ವಿದ್ಯುತ್ ಕಂಪನ ಚಿಕಿತ್ಸೆಯನ್ನು MODIFIED ELECTROCONVULSIVE THERAPY(MECT) ಎಂದು ಕರೆಯುತ್ತೇವೆ .. ಇದನ್ನು ಹೆಚ್ಚಾಗಿ ತೀವ್ರ ಬಗೆಯ ಮಾನಸಿಕ ಸಮಸ್ಯೆ ಇರುವವರು ,ಮಾತ್ರೆ ಇಂಜೆಕ್ಷನ್ ಗೆ ಬಗ್ಗದ ಮಾನಸಿಕ ಕಾಯಿಲೆ ಇರುವವರು ,ಮಾನಸಿಕ ಸಮಸ್ಯೆಯಿಂದ ಊಟ ತಿಂಡಿ ಬಿಟ್ಟು ತನ್ನ ದೈನಂದಿನ ಕೆಲಸಗಳನ್ನು ಮಾಡದೇ ಇರುವವರು ,ಆತ್ಮಹತ್ಯೆಯ ಯೋಚನೆಯನ್ನು ತೀವ್ರವಾಗಿ ಪರಿಗಣಿಸಿ ಆತ್ಮಹತ್ಯೆ ಪ್ರಯತ್ನವನ್ನು ಮಾಡಲು ಪ್ರಯತ್ನಿಸುವವರು ಇಂಥವರಿಗೆ ಕೊಡಲಾಗುತ್ತದೆ ..ತೀವ್ರ ಬಗೆಯ ಖಿನ್ನತೆಗೆ ಇದು ಬಹಳ ಒಳ್ಳೆಯ ಮದ್ದು .. ಬಹಳಷ್ಟು ಜನರಲ್ಲಿ ಇರುವ ಸಂಶಯ ಏನೆಂದರೆ ತಲೆಗೆ ಕರೆಂಟ್ ಕೊಡಲಾಗುತ್ತದೆ ..ಇದರಿಂದ ಮಿದುಳಿಗೆ ಹಾನಿ ಉಂಟಾಗುತ್ತದೆ ..ಇದನ್ನು ಭಯಾನಕವಾಗಿ ನಮ್ಮ ಮೀಡಿಯಾದವರು ಕೂಡ ಸಿನಿಮಾಗಳಲ್ಲಿ ಚಿತ್ರಿಸುತ್ತಾರೆ.ಸಿನಿಮಾಗಳಲ್ಲಿ ಪೇಪರ್ಗಳಲ್ಲಿ ಇದರ ಬಗ್ಗೆ ಈ MECTಚಿಕಿತ್ಸೆ ಸಿಗುವಾಗ ರೋಗಿ ಚೀರುತ್ತಾನೆ ಹೆದರುತ್ತಾನೆ ಎಂದೆಲ್ಲ ತೋರಿಸುತ್ತಾರೆ .ಅಂತಹ ಯಾವುದೇ ಸನ್ನಿವೇಶ ನಿಜವಾಗಿ ಸಂಭವಿಸುವುದಿಲ್ಲ ರೋಗಿಗೆ ಅರಿವಳಿಕೆ ಕೊಡಲಾಗಿರುತ್ತದೆ ಹಾಗೂ ಅರವತ್ತರಿಂದ ಎಪ್ಪತ್ತು ವೋಲ್ಟ್ ಕರೆಂಟನ್ನು ಆತನ ತಲೆಗೆ ಕೊಡಲಾಗುತ್ತದೆ ..ಈ ಕರೆಂಟನ್ನು ಒಂದು ಸೆಕೆಂಡ್ಗಿಂತ ಕಡಿಮೆ ಅವಧಿಗೆ ಕೊಡಲಾಗುತ್ತದೆ .ಈ ಕರೆಂಟ್ ಕೊಟ್ಟಾಗ ಆತನಿಗೆ ಒಂದು ಬಗೆಯ “ಫಿಟ್ಸ್” ಬರುತ್ತದೆ ಆತನಿಗೆ ಏನೂ ಗೊತ್ತಾಗುವುದಿಲ್ಲ .

ಈ “ಫಿಟ್ಸ್ “ಉಂಟಾಗುವಾಗ ಮಿದುಳಿನಲ್ಲಿ ನರವಾಹಕಗಳಲ್ಲಿ ಬದಲಾವಣೆ ಉಂಟಾಗುತ್ತದೆ ..ಈ ನರವಾಹಕಗಳ ಬದಲಾವಣೆಯ ಚಿಕಿತ್ಸೆಗೆ ಮೂಲ ..ಈ ಚಿಕಿತ್ಸೆ ಸಿಕ್ಕವರು ನೆನಪಿನ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎನ್ನುವುದು ಬಹಳ ದೊಡ್ಡ ಸುಳ್ಳು .೨೧ ರಿಂದ ೩೦ ದಿನಗಳವರೆಗೆ ದೈನಂದಿನ ನೆನಪುಗಳಲ್ಲಿ ಸ್ವಲ್ಪ ಏರುಪೇರಾಗುವುದು ನಿಜ ಆದರೆ ಇದು ಶಾಶ್ವತ ಎಂಬುದು ಸುಳ್ಳು ..ಈ ಚಿಕಿತ್ಸೆಯನ್ನು ಅಧಿಕಾರಿಗಳಿಗೆ ,ಟೀಚರ್ಗಳಿಗೆ ,ವೈದ್ಯರುಗಳಿಗೆ ಕೊಟ್ಟಿದ್ದೇನೆ..ಅವರು ಯಾರೂ “ಡಲ್ “ಆಗಿಲ್ಲ ..ತೀವ್ರ ಬಗೆಯ ಆತ್ಮಹತ್ಯೆ ಯೋಚನೆಯಿಂದ ಬಳಲುತ್ತಿದ್ದ ಹಲವಾರು ಜನ ಈಗ ನನ್ನ ಹಾಗೆ ,ನಿಮ್ಮ ಹಾಗೆ ಯಾವುದೇ ಸಮಸ್ಯೆ ಇಲ್ಲದೆ ಬದುಕುತ್ತಿದ್ದಾರೆ .ನಿಮ್ಮ ಪ್ರೀತಿ ಪಾತ್ರರಿಗೆ ವೈದ್ಯರು ಯಾರಾದರೂ ಈ ಚಿಕಿತ್ಸೆಯನ್ನು ಕೊಡಿ ಎಂದು ಹೇಳಿದರೆ ಈ ಎಲ್ಲ ಯೋಚನೆಗಳನ್ನು ಮಾಡಿ . ಮೇಲೆ ಹೇಳಿದ ವಿಷಯಗಳನ್ನು ಗಮನಿಸಿ ನಿರ್ಧರಿಸಿ.

Leave a Reply