ಜನಪ್ರಿಯ ವಿಡಂಬನಾತ್ಮಕ ಫೇಸ್ಬುಕ್ ಪುಟ ಹ್ಯೂಮನ್ಸ್ ಆಫ್ ಹಿಂದುತ್ವ (HOH) ವ್ಯಕ್ತಿಗೆ ಸಾವಿನ ಬೆದರಿಕೆಗಳು ಬಂದಿದೆ ಎಂದು ಅವರು ಹೇಳಿದ್ದು, ನಂತರ ಅವರು ಆ ಪುಟವನ್ನು ಅಳಿಸಿದ್ದಾರೆ.

ಒಂದು ಸಣ್ಣ ವಿದಾಯ ಸಂದೇಶದಲ್ಲಿ, ನಿರ್ವಾಹಕ “ಗೌರಿ ಲಂಕೇಶ್ ಅಥವಾ ಅಫ್ರಾಝಲ್ ಖಾನ್ ನಂತೆ ಜೀವನ ಅಂತ್ಯಗೊಳ್ಳುವ ಬಯಕೆಯನ್ನು ನಾನು ಹೊಂದಿಲ್ಲ” ಎಂದು ಹೇಳಿದರು. ಅವರು ಈ ಹೋರಾಟದಲ್ಲಿ ಗೆದ್ದ ಹಿಂದೂತ್ವವನ್ನು ಅಭಿನಂದಿಸಿದರು.

ನನ್ನ ಸ್ವಂತ ನಿರ್ಧಾರದಿಂದ ಹೊರಬಂದಿದ್ದೇನೆ. ನನ್ನ ಪುಟಕ್ಕೆ ಬ್ಯಾನ್ ಬಿದ್ದಿಲ್ಲ ಮತ್ತು ಯಾವುದೇ ಸಾರ್ವಜನಿಕ ದೂರು ದಾಖಲಾಗಿಲ್ಲ. ನನಗೆ ಜೀವ ಬೆದರಿಕೆ ಸಂದೇಶ ಬಂದಿದ್ದು ನಾನು ಬಿಜೆಪಿ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ. ಯಾವುದೇ ರಾಜಕೀಯವಪ್ರಭಾವ ಅಥವಾ ಪೊಲೀಸ್ ಸಂಬಂಧವಿಲ್ಲದ ಮಧ್ಯಮ ವರ್ಗದ ಕುಟುಂಬದಿಂದ ನಾನು ಬಂದಿದ್ದೇನೆ. ಗೌರಿ ಲಂಕೇಶ್ ಅಥವಾ ಅಫ್ರಾಝುಲ್ ಖಾನ್ರಂತೆ ಅಂತ್ಯಗೊಳ್ಳುವ ಬಯಕೆ ನನಗೆ ಇಲ್ಲ. ವಾಸ್ತವವಾಗಿ, ನನ್ನ ಕುಟುಂಬದ ಸುರಕ್ಷತೆಗಾಗಿ ನಾನು ಹೆಚ್ಚು ಚಿಂತೆ ಮಾಡುತ್ತೇನೆ. ನನಗೆ ಬೆದರಿಕೆ ಹಾಕಿದವರು ಇದನ್ನು ವಿಜಯವೆಂದು ಪರಿಗಣಿಸುತ್ತಾರೆ HOH ಫೇಸ್ಬುಕ್ ಪುಟವನ್ನು ನಾನು ಅಳಿಸಿ ಹಾಕಿದ್ದೇನೆ. ಶೀಘ್ರದಲ್ಲೇ ಈ ವೆಬ್ಸೈಟ್ ಅನ್ನು ಕೊನೆಗೊಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Leave a Reply