ಕೊಲಂಬೊ: ಕೆಸ್ತರ ಪವಿತ್ರ ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ 5 ಚರ್ಚ್‌ಗಳು ಸೇರಿ 8 ಕಡೆಗಳಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟಿಸಿದ್ದು ೫ ಭಾರತೀಯರು ಸೇರಿದಂತೆ ಸಾವಿನ ಸಂಖ್ಯೆ 290 ದಾಟಿದೆ. ಘಟನೆಯಲ್ಲಿ 500 ಮಂದಿ ಗಾಯಗೊಂಡಿದ್ದು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆಯು 5 ಕ್ಕೆ ಹೆಚ್ಚಿದೆ ಎಂದು ಭಾರತೀಯ ದೂತಾವಾಸ ದೃಢಪಡಿಸಿದೆ.  ಲಂಕಾದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ಗುಪ್ತಚರ ವರದಿ ನಿರ್ಲಕ್ಷಿಸಿದ್ದರ ಪರಿಣಾಮ ನೂರಾರು ಮಂದಿ ಅಮಾಯಕರು ಜೇವತೆರಬೇಕಾಯಿತು. ಗುಡ್ ಫ್ರೈಡೆ ಬಳಿಕ ಕೈಸ್ತರ ಸಾಂಪ್ರದಾಯಿಕ ಈಸ್ಟರ್‌ ಆಚರಣೆ ಭಾನುವಾರ ನಡೆಯುತ್ತಿದ್ದ ಕಾರಣ ಚರ್ಚ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ವೇಳೆಯೇ ಚರ್ಚ್‌ಗಳಲ್ಲಿ ಸ್ಫೋಟ ಸಂಭವಿಸಿದೆ.

Leave a Reply