ಮಂಗಳೂರು: ನಿನ್ನೆ ಸಂಜೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ದೀಪಕ್ ಶವವನ್ನು ಪೋಲಿಸರು ಮಂಗಳೂರಿನ ಎಜೆ ಆಸ್ಪತ್ರೆಯ ಹಿಂದಿನ ಬಾಗಿಲಿನಿಂದ ಬೆಳಗ್ಗೆ ಆರು ಗಂಟೆಗೆ ಕಾಟಿಪಲ್ಲದ ಮನೆಗೆ ಸಾಗಿಸಿದ್ದಾರೆ.

ಶವ ಈಗ ಮೃತ ದೀಪಕ್ ನಿವಾಸಕ್ಕೆ ಆಂಬ್ಯುಲೆನ್ಸ್‌ ಮುಖಾಂತರ ಸಾಗಿಸಿದ್ದು, ಬಿಜೆಪಿ ಕಾರ್ಯಕರ್ತರು ಹಾಗು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶವ ಇಳಿಸಲು ತಡೆಯೊಡ್ಡಿದ್ದಾರೆ ಮತ್ತು ಗೃಹ ಸಚಿವರು ಬರದೇ ನಾವು ಶವ ಇಳಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇಂದು ದೀಪಕ್ ಶವ ಸಂಸ್ಕಾರ ಯಾತ್ರೆ ಎಜೆ ಆಸ್ಪತ್ರೆಯಿಂದ ಅವರ ನಿವಾಸದವರೆಗೆ ನಡೆಯಲಿದ್ದು, ಇದಕ್ಕೆ ಪೋಲಿಸರು ಅನುಮತಿ ನಿರಾಕರಿಸಿದ್ದರಿಂದ ಪಟ್ಟು ಹಿಡಿದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶವ ಯಾತ್ರೆಯನ್ನು ನಡೆಸುವುದಾಗಿ ಹೇಳಿದ್ದರು.‌ ಈ ಹಿಂದೆ ನಡೆದ ಇದೇ ರೀತಿಯ ಹಲವು ಯಾತ್ರೆಗಳು ಗಲಭೆಗೆ ತಿರುಗಿದ್ದರಿಂದ ಶವ ಯಾತ್ರೆಗೆ ಅನುಮತಿ ನಿರಾಕರಿಸಿದ್ದರೆನ್ನಲಾಗಿದೆ.

Leave a Reply