image NDtv

ಹೊಸದಿಲ್ಲಿ: ಮನೆಯೊಂದರ ಟೆರೆಸಿನಲ್ಲಿ ಕಟ್ಟಿಹಾಕಲಾಗಿದ್ದ 50 ವರ್ಷದ ಮಹಿಳೆಯೊಬ್ಬರನ್ನು ದಿಲ್ಲಿ ಮಹಿಳಾ ಆಯೋಗ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ ಎಲುಬಿನಗೂಡಿನಂತಾಗಿದ್ದ ಮಹಿಳೆ ಮಾತಾಡಲು ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಮತ್ತು ಜನರನ್ನು ಗುರುತಿಸಲು ಸಾಧ್ಯವಾಗಿಲ್ಲ. ಮಲವಿಸರ್ಜನೆಗಳ ನಡುವೆ ಬಿದ್ದು ಕೊಂಡಿದ್ದರು.

ದಿಲ್ಲಿಯ ಮಹಿಳಾ ಆಯೋಗ ಕಳೆದ ದಿವಸ ರೋಹಿಣಿ ಸೆಕ್ಟರಿನ ಮನೆಯೊಂದರ ಟೆರೆಸ್‍ನಿಂದ ಮಹಿಳೆಯನ್ನು ರಕ್ಷಿಸಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಹಿಳೆ ತೀವ್ರ ದಯನೀಯ ಸ್ಥಿತಿಯಲ್ಲಿ ಉಸಿರು ಉಳಿಸಿಕೊಂಡು ನರಳುತ್ತಿದ್ದರು. ಸ್ವಂತ ಸಹೋದರನೇ ಇವರನ್ನು ಈಸ್ಥಿತಿಗೆ ದೂಡಿಹಾಕಿದ್ದನು ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಹಿವಾಲ್ ಹೇಳಿದ್ದಾರೆ.

ನಾಲ್ಕು ದಿವಸಕ್ಕೊಮ್ಮೆ ಒಂದು ತುಂಡು ಬ್ರಡ್ ಮಾತ್ರ ತಿನ್ನಲು ಕೊಡುತ್ತಿದ್ದರು.ಯಾರನ್ನು ಭೇಟಿಯಾಗಲು ಬಿಡುತ್ತಿರಲಿಲ್ಲ ಎಂದು 50 ವರ್ಷದ ಮಹಿಳೆ ಮಹಿಳಾ ಆಯೋಗಕ್ಕೆ ತಿಳಿಸಿದ್ದಾರೆ. ಮಹಿಳೆಯ ಸಹೋದರ ವಿರುದ್ಧ ರೋಹಿಣಿ ಸೆಕ್ಟರ್‍ನಲ್ಲಿ ದೂರು ನೀಡಲಾಗಿದೆ ಎಂದು ಮಹಿಳಾ ಆಯೋಗ ತಿಳಿಸಿದೆ.

ಸ್ವಂತ ಸಹೋದರನೆ ಎರಡು ವರ್ಷಗಳಿಂದ ಹೀಗೆ ಕಟ್ಟಿಹಾಕಿದ್ದಾನೆ. ತನ್ನ ವಿಸರ್ಜನೆಯ ನಡುವೆ ಬಿದ್ದು ಕೊಂಡಿದ್ದರು. ಮಾತಾಡುವುದಕ್ಕೆ ನಡೆಯಲು ಜನರನ್ನು ಗುರುತಿಸಲು ಅವರಿಗೆ ಸಾಧ್ಯವಾಗಿಲ್ಲ. ಕೇವಲ ಐವತ್ತು ವರ್ಷ ವಯಸ್ಸುಮಾತ್ರ ಆಗಿದೆ. ನೋಡುವಾಗ ತೊಂಬತ್ತು ವರ್ಷ ಕಳೆದಿದೆ ಎನ್ನುವಷ್ಟು ದುರ್ಬಲೆಯಾಗಿದ್ದಾರೆ ಎಂದು ಮಹಿವಾಲ್ ತಿಳಿಸಿದರು.

Leave a Reply