ಬೇಕಾಗುವ ಸಾಮಗ್ರಿ:

ಟೊಮೆಟೊ – 1ಕೆ.ಜಿ., ಈರುಳ್ಳಿ – 1 ದೊಡ್ಡದು, ಬೆಳ್ಳುಳ್ಳಿ – 6-8 ಎಸಳು, ಶುಂಠಿ -1 ಇಂಚು ತುಂಡು, ಸಕ್ಕರೆ – 600 ಗ್ರಾಮ್, ಕೆಂಪು ಮೆಣಸಿನ ಹುಡಿ – 1 ಟೀ ಚಮಚ,  ಗರಮ್ ಮಸಾಲೆ ಹುಡಿ – 1 ಟೀ ಚಮಚ, ವಿನೆಗರ್ – 6-8 ಹನಿಗಳು, ಎಣ್ಣೆ – 1 ಟೇಬಲ್ ಚಮಚ, ಉಪ್ಪು – ಒಂದೂವರೆ ಟೀ ಚಮಚ.

ತಯಾರಿಸುವ ವಿಧಾನ: 

* ಟೊಮೆಟೊವನ್ನು ನೀರಿನಲ್ಲಿ ಬೇಯಿಸಿ, ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿ ಇಡಿ.
* ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಶುಂಠಿಯನ್ನು ಪೇಸ್ಟ್ ಮಾಡಿ.
* ಸ್ವಲ್ಪ ಎಣ್ಣೆಯನ್ನು ಪ್ಯಾನ್‍ನಲ್ಲಿ ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿಸಿ ಕಂದು ಬಣ್ಣ ಬರುವ ವರೆಗೆ ಹುರಿಯಿರಿ.
* ಇದಕ್ಕೆ ಟೊಮೆಟೊ ಅರೆದದ್ದು, ಸಕ್ಕರೆ, ಉಪ್ಪು, ಮೆಣಸಿನ ಹುಡಿ ಸೇರಿಸಿ ದಪ್ಪಗಾಗುವ ವರೆಗೆ ಕುದಿಸಿ.
* ಕೊನೆಯಲ್ಲಿ ಗರಮ್ ಮಸಾಲೆ ಹುಡಿ, ವಿನೆಗರ್ ಸೇರಿಸಿ ಐದು ನಿಮಿಷ ಪುನಃ ಕುದಿಸಿ.
* ತಣ್ಣಗಾದ ಬಳಿಕ ಡಬ್ಬದಲ್ಲಿ ತುಂಬಿಸಿಡಿ.

Leave a Reply