ಮುಸಲ್ಮಾನರಲ್ಲಿ ಮಾತನಾಡಿದರೆ ಜಾಗ್ರತೆ ಎಂದು ಮಂಗಳೂರಿನ ಬಂಟ್ವಾಳದ ಸಮೀಪ ಮೇರಮಜಲು ಗ್ರಾಮದ ಮನೆಗೆ ನುಗ್ಗಿ ಬೆದರಿಕೆ ಹಾಕಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ಹೇಳಿದ್ದಾರೆ.

ಬಂಧಿತ ಆರೋಪಗಳನ್ನು ರಿಕ್ಷಾ ಚಾಲಕ ಉಮೇಶ್ 33 ಮತ್ತು ರಮೇಶ್ 48 ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೇರಮಜಲಿನ ಯುವತಿ ಮುಸ್ಲಿಮರೊಂದಿಗೆ ಸ್ನೇಹ ಬೆಳೆಸಿದ್ದಾಳೆ ಎಂದು ಆರೋಪಿಸಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಕರಾವಳಿ ಪ್ರದೇಶದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದಾಗಿದೆ.ಚಿಕ್ಕಮಗಳೂರಿನಲ್ಲಿ ಮನನೊಂದು ಧನ್ಯಶ್ರೀ ಆತ್ಮಹತ್ಯೆ ಮಾಡಿದ ಬೆನ್ನಿಗೇ ಇನ್ನೊಂದು ಪ್ರಕರಣ ನಡೆದಿದೆ.

Leave a Reply