ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅಜ್ಞಾತ ವ್ಯಕ್ತಿಯಿಂದ 20 ವರ್ಷ ವಯಸ್ಸಿನ ವಿಕಲ ಚೇತನ ಯುವತಿಯನ್ನು ತಿಂಗಳುಗಳವರೆಗೆ ನಿರಂತರ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. ಆಕೆ ಹೊಟ್ಟೆನೋವು ಎಂದಾಗ ಹೆತ್ತವರು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಹೇಳಿದಾಗ ಈ ಅಪರಾಧ ಬೆಳಕಿಗೆ ಬಂದಿತು ಎಂದು ಪೊಲೀಸ್ ಹೇಳಿದರು. ಅತ್ಯಾಚಾರ ಸಂತ್ರಸ್ತೆಯ ಹೆತ್ತವರು ಕಾರ್ಮಿಕರಾಗಿದ್ದು, ತಂದೆತಾಯಿ ಕೆಲಸಕ್ಕೆ ಹೊರಟು ಹೋದಾಗ ಆಕೆ ಮನೆಯಲ್ಲಿ ಒಂಟಿಯಾಗಿದ್ದ ಸಮಯ ನೋಡಿ ದುರುಳ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಗುರುತಿಸಲು ಆ ವಿಕಲ ಚೇತನ ಯುವತಿಗೆ ಇದುವರೆಗೆ ಸಾಧ್ಯವಾಗಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ಪೊಲೀಸರನ್ನು ಉಲ್ಲೇಖಿಸಿ ತಿಳಿಸಿದೆ. ಪೋಷಕರು ಸೋಮವಾರ ದೂರು ಸಲ್ಲಿಸಿದ್ದು, ಪೊಲೀಸ್ ಐಪಿಸಿ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶಕ್ತ ಪ್ರಯತ್ನ ಮುಂದುವರೆಸಿದ್ದಾರೆ.

Leave a Reply