ಏಳನೇ ಹಂತದ ಚುನಾವಣೆಗೆ ಅಣಿಯಾಗುತ್ತಿರುವಾಗ ಕಾಂಗ್ರೇಸ್ ಮುಖಂಡ ಹಾಗೂ ಭೂಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ ಸಿಂಗ್ ಬಿಜೆಪಿಯ ಅಜೆಂಡಾದ ಬಗ್ಗೆ ಬಿಜೆಪಿ ವಿರುದ್ಧ ಪ್ರಹಾರ ನಡೆಸಿದ್ದು, ಬಿಜೆಪಿಯವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಮತ ಕೇಳುತ್ತಿದ್ದಾರೆ. ಮುಸ್ಲಿಮರು ಈ ದೇಶವನ್ನು 550 ವರ್ಷ ಆಳಿದ್ದಾರೆ.

ಆಗ ಹಿಂದೂ ಧರ್ಮಕ್ಕೆ ಏನೂ ಅಪಾಯ ಆಗಿರಲಿಲ್ಲ. ಮತ್ತೆ ಈಗ ಮುಸ್ಲಿಮರು ಅಲ್ಪಸಂಖ್ಯಾತರಾಗಿರುವಾಗ ಹಿಂದೂ ಧರ್ಮಕ್ಕೆ ಏನಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ದೇಶವನ್ನು ಮುನ್ನಡೆಸುವ ಮನಸ್ಸಿದ್ದರೆ, ಎಲ್ಲರನ್ನೂ ಒಟ್ಟಿಗೆ ಸೇರಿಸಿ ಮುನ್ನಡೆಸಿ. ಹಿಂದೂ-ಮುಸ್ಲಿಮ್-ಸಿಖ್-ಇಸಾಯಿ ಎಲ್ಲರೂ ಈ ದೇಶದ ನಾಗರಿಕರಾಗಿದ್ದಾರೆ ಎಂದು ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್ ಹೇಳಿದರು. ಸನಾತನ ಧರ್ಮ ಅಷ್ಟೂ ದುರ್ಬಲವೇ ಯಾರೋ ಬಂದು ಹೇಳಿದರೆ ಅಪಾಯದಲ್ಲಿರಲು ಎಂದು ಪ್ರಶ್ನೆ ಹಾಕಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಸನಾತನ ಧರ್ಮ ಲಕ್ಷಾಂತರ ವರ್ಷಗಳಿಂದ ಹೀಗೇಯೇ ಇದೆ.

ಇದರ ಮಧ್ಯೆ ಇಲ್ಲಿ ಹಲವರು ಬಂದು ಹೋಗಿದ್ದಾರೆ. 550 ವರ್ಷ ಮುಸ್ಲಿಮರಿದ್ದರು, 150 ವರ್ಷ ಬ್ರಿಟೀಷರು ಆಳಿದ್ದಾರೆ. ಆಗ ಸನಾತನ ಧರ್ಮ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದು ಸಿಂಗ್ ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸ್ಪರ್ಧಿಸುತ್ತಿದ್ದು, ಗೋಡ್ಸೆಯ ಕುರಿತ ವಿವಾದಿತ ಹೇಳಿಕೆಗೆ ಬಿಜೆಪಿ ಸ್ವತಃ ಅವರನ್ನು ಖಂಡಿಸಿದೆ.

Leave a Reply