ಶಿಲ್ಲಾಂಗ್: ಇತ್ತೀಚೆಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷ ಅಪರೂಪದ ಫೋಟೊ ವೀಡಿಯೊಗಳನ್ನು ಹಾಕ ತೊಡಗಿದ್ದಾರೆ. ಇಂತಹ ಪೋಸ್ಟ್ ಗಳಿಂದ ಪ್ರಸಿದ್ಧರೂ ಆಗುತ್ತಿದ್ದಾರೆ.ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರ್ ಆದ ವೀಡಿಯೊವೊಂದನ್ನು ನಂಬಲೇ ಆಗುತ್ತಿಲ್ಲ. ವೀಡಿಯೊ ನೀವೆ ನೋಡಿ ಆನಂದಿಸಿ.
ಒಂದು ನಾಯಿ ಕಾರನ್ನು ಟ್ರಾಫಿಕ್ನಲ್ಲಿಯೂ ಚಲಾಯಿಸಿಕೊಂಡು ಹೋಗುತ್ತಿದೆ. ಮಾತ್ರವಲ್ಲ ನಾಯಿ ರಸ್ತೆಯ ಮಧ್ಯೆ, ಜನರು ತುಂಬಿದ ರಸ್ತೆಯಲ್ಲಿ ಕಾರನ್ನು ಚಲಾಯಿಸುತ್ತಿದೆ. ಮಾರುತಿ 800 ಕಾರನ್ನು ಚಾಲಕ ಸೀಟಿನಲ್ಲಿ ಕುಳಿತು ಸ್ಟೇರಿಂಗ್ ಹಿಡಿದು ಚಲಾಯಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ಘಟನೆ ನಡೆದಿದ್ದು, ನಾಯಿ ಕಾರು ಚಾಲನೆ ಮಾಡುವಾಗ ಪಕ್ಕದ ಸೀಟಿನಲ್ಲಿ ಇನ್ನೊಬ್ಬವ್ಯಕ್ತಿ ಇದ್ದರು.
ರಸ್ತೆಯಲ್ಲಿ ನಾಯಿ ಕಾರು ಚಲಾಯಿಸುತ್ತಿರುವುದನ್ನು ನೋಡಿ ಯಾರೊ ಒಬ್ಬರು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ್ದಾರೆ. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ನಂತರ ಕೋಲಾಹಲವೇ ಆಗಿದೆ. ಅಂದರೆ ವಿಪರೀತ ಶೇರ್ ಮಾಡಲಾಗಿದೆ.ಶಿಲ್ಲಾಂಗ್ ಪೊಲೀಸರು ತನಿಖೆ ನಡೆಸಿ ಕಾರಿನ ಮಾಲಿಕನಿಗೆ 1000 ರೂಪಾಯಿ ದಂಡ ವಿಧಿಸಿದ್ದಾರೆ.