ಸೂರತ್ : ಗುಜರಾತ್ ನ ಸೂರತ್ ನಿಂದ ಬಹಳ ಹೃದಯ ವಿದ್ರಾವಕ ಪ್ರಕರಣ ಹೊರಬಿದ್ದಿದೆ. ಈ ಪ್ರಕರಣವು ವೆಸುವಿನ ಭಗವಾನ್ ಮಹಾವೀರ್ ಕಾಲೇಜಿನ ಬಳಿ ನಡೆದಿದ್ದು, ಇಬ್ಬರು ವ್ಯಕ್ತಿಗಳು ನಾಯಿಯನ್ನು ಬೈಕ್ ನಲ್ಲಿ ರಸ್ತೆಯ ಮೇಲೆ ಎಳೆದುಕೊಂಡು ಹೋಗಿದ್ದಾರೆ. ರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರು ಈ ಘಟನೆಯ ವಿಡಿಯೋ ಮಾಡಿದ್ದಾರೆ. ದುಷ್ಕರ್ಮಿಗಳಲ್ಲಿ ಒಬ್ಬನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಹೊರಬಿದ್ದ ನಂತರ ಮಹಿಳಾ ಸಮಾಜ ಸೇವಕಿ ಸಲೋನಿ ರತಿ ಖತೋದರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಓರ್ವ ಆರೋಪಿಗಳನ್ನು ಬಂಧಿಸಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ.

ಈ ಪ್ರಕರಣದಲ್ಲಿ ನಗರದ ಸೊಸೈಟಿ ಫಾರ್ ಅನಿಮಲ್ ಸೇಫ್ಟಿ ಇಂಡಿಯಾದ ರಾಜ್ಯ ಕಾರ್ಯದರ್ಶಿ ಸಲೋನಿ ರತಿ ದೂರು ದಾಖಲಿಸಿದ ನಂತರ ಮನ್ಪಾ ಅಡಿಯಲ್ಲಿ ಅಥಾವಾ ವಲಯದಲ್ಲಿ ಕೆಲಸ ಮಾಡುತ್ತಿದ್ದ ಬೆಲ್ದಾರ್ ಹಿತೇಶ್ (32) ವಿರುದ್ಧ ಕ್ರಮ ಕೈಗೊಂಡು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಹಿತೇಶ್ ಎಂಬ ವ್ಯಕ್ತಿಯ ಬೈಕ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply