ಹೌದು. ಮನುಷ್ಯರು ನಿದ್ರಿಸುವಂತೆ ಪ್ರತಿಯೊಂದು ಜೀವಿಗಳೂ ತಮ್ಮದೇ ಆದ ರೀತಿಯಲ್ಲಿ ನಿದ್ರಿಸಿ ವಿಶ್ರಾಂತಿ ಪಡೆಯುತ್ತವೆ. ಆದರೆ ಮನುಷ್ಯರು ಮಲಗಿ ನಿದ್ರಿಸುವಂತೆ ಮೀನುಗಳು ಮಲಗಿ ನಿದ್ರಿಸುವುದಿಲ್ಲ. ಯಾಕೆಂದರೆ ಮೀನುಗಳಿಗೆ ಕಣ್ಣುಗಳನ್ನು ಮುಚ್ಚಲು ಸಾಧ್ಯವಿಲ್ಲ. ಯಾಕೆಂದರೆ ಅವುಗಳಿಗೆ ರೆಪ್ಪೆಗಳಿಲ್ಲ. ಮೀನುಗಳು ಮಲಗಿದ್ದಾಗಲೂ ಕೂಡಾ ಚಲಿಸುತ್ತವೆ ಮತ್ತು ಕಣ್ಣುಗಳನ್ನು ತೆರೆದಿರಿಸುತ್ತವೆ. ಮೀನುಗಳಲ್ಲಿ ಒಂದು ವಿಧದ ಮೀನಾದ ಪುಪ್ಪುಸ ಮೀನು ಮಣ್ಣಿನಲ್ಲಿ ಒಂದು ಸುರಂಗವನ್ನು ಕೊರೆದು ಅದರೊಳಗೆ ದೀರ್ಘಕಾಲ ನಿದ್ರಿಸುತ್ತದೆ. ಈ ರೀತಿ ಮಲಗುವ ಮೀನಿಗೆ ಬೇಸಿಗೆಯ ನಿದ್ದೆ ಎಂದು ಕರೆಯುತ್ತಾರೆ.

Leave a Reply