ಕೋಲಾರ: ಅತಿಯಾಗಿ ಕುಡಿದರೆ ತಾಯಿ ಯಾರು? ಸಹೋದರಿ ಯಾರು ಎಂಬ ಪರಿವೇ ಇರುವುದಿಲ್ಲ. ಪಾನಮತ್ತನಾಗಿ ಹೆತ್ತ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ ಈ ಪಾಪಿ.ಮಾತ್ರವಲ್ಲ ಅಷ್ಟೂ ಸಾಲದೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಕೋಲಾರ ಜಿಲ್ಲೆಯ ಗಡಿ ಆಂಧ್ರದ ಚಿತ್ತೂರು ಜಿಲ್ಲೆಯ ವಿ ಕೋಟಾ ಬಳಿ ಇರುವ ಶಿವನಿ ಕುಪ್ಪಂ ಗ್ರಾಮದಲ್ಲಿ ನಡೆದಿದೆ.

ತಾನು ಸಾಕಿ ಸಲಹಿದ ಮಗನಿಂದಲೇ, 50 ವರ್ಷದ ಯಲ್ಲಮ್ಮ ಕೊಲೆಯಾದ ದುರ್ದೈವಿ.
ಹೊಸ ವರ್ಷದಲ್ಲಿ ನಶೆಯೇರುವ ತನಕ ಕುಡಿದ ಆರೋಪಿ ಮಗ ಸುಬ್ರಮಣ್ಯ (28) ಸೋಮವಾರ ಈ ಕೃತ್ಯ ಎಸಗಿದ್ದಾನೆ.

ವಿಷಯ ತಿಳಿದ ಗ್ರಾಮಸ್ಥರು ಆತನನ್ನು ಕಂಬಕ್ಕೆ ಕಟ್ಟಿ ಸರಿಯಾಗಿ ಥಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply