ಕ್ಯಾನ್ಸರ್ ಪೀಡಿತವಾದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ತನಗೆ ಬ್ಯಾಟ್‌ಮ್ಯಾನ್‌ ನನ್ನು ನೋಡಬೇಕು ಎಂದು ಮಗು ಆಸೆ ಪಟ್ಟಿತ್ತು. ಆಸ್ಪತ್ರೆಗೆ ದಾಖಲಾದ ಮಗುವಿನ ಆಸೆ ಈಡೇರಿಸಲು ಬ್ಯಾಟ್‌ಮ್ಯಾನ್‌ನನ್ನು ಅಲ್ಲಿಗೆ ಕರೆಸಲಾಯಿತು. ಆದರೆ ಆ ಬ್ಯಾಟ್ ಮ್ಯಾನ್ ಬೇರಾರೂ ಅಲ್ಲ, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಸ್ವತಃ ಬ್ಯಾಟ್‌ಮ್ಯಾನ್‌ನ ವೇಷ ಹಾಕಿ ಬಂದಿದ್ದಾರೆ. ಮಾತ್ರವಲ್ಲ ನಿಜವಾದ ಬ್ಯಾಟ್‌ಮ್ಯಾನ್‌ ಬಂದಿದ್ದಾನೆ ಎಂದು ಮಗು ಅಂದು ಕೊಂಡಿದೆ.

ದಿ ಫೀಲ್ ಗುಡ್ ಪೇಜ್‌ನಲ್ಲಿನ ಈ ವಿಡಿಯೋ ಶೇರ್ ಮಾಡಲಾಗಿದ್ದು, ಮಗುವಿನ ಮುಂದೆ ಸೂಪರ್ ಹೀರೊ ಆಗಿ ಡಾಕ್ಟರ್ ಬಂದು ಮಗುವನ್ನು ಸಂತೈಸುವುದು ಕಾಣುತ್ತದೆ. ಮಾತ್ರವಲ್ಲ ಬ್ಯಾಟ್ ಮ್ಯಾನ್ ಆ ಮಗುವನ್ನು ಅಪ್ಪಿ ಹಿಡಿಯುವ ದೃಶ್ಯ ತುಂಬಾ ಭಾವನಾತ್ಮಕವಾಗಿದೆ. ಈ ಸಂದರ್ಭದಲ್ಲಿ ವೈದ್ಯರು ಕೂಡ ಭಾವುಕರಾಗುತ್ತಾರೆ.

ವಿಡಿಯೋ ನೋಡಿ

https://twitter.com/i/status/1327799502552502274

Leave a Reply