ಮಂಗಳೂರು: ಮಂಗಳೂರಿನಲ್ಲಿ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಬ್ಯಾರೀ ಝುಲ್ಫಿ ನಡೆಸುತ್ತರುವ ಬ್ಯಾರಿ ಬಾಸ್ ಕಾರ್ಯಕ್ರಮದ ಬಗ್ಗೆ ಇಂದು ಅದರ ವ್ಯವಸ್ಥಾಪಕ ತಂಡವು ಮಾಜಿ ಶಾಸಕ ಮೊಯ್ದಿನ್ ಬಾವಾರವರನ್ನು ಭೇಟಿ ಯಾಗಿದ್ದು, ಬ್ಯಾರಿ ಬಾಸ್ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ತಿಳಿದ ಬಳಿಕ ಬ್ಯಾರಿ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಬ್ಯಾರಿ ಬಾಸ್ ಟಾಸ್ಕ್ ಮತ್ತು ಕಾರ್ಯಕ್ರಮಗಳ ವಿವರಣೆಯನ್ನು ಬ್ಯಾರಿ ಝುಲ್ಫಿ ಮತ್ತು ಶರೀಫ್ ಅಬ್ಬಾಸ್ ವಳಾಲ್ ರವರು ಅವರಿಗೆ ತಿಳಿಸಿದ್ದು, ಇಂತಹ ಸಮಾಜಮುಖಿ ಕಾರ್ಯಕ್ರಮದ ಭಾಗವಾಗಬೇಕು ಎಂದು ಅವರು ಹೇಳಿದ್ದಾರೆ.

ಸಮಾಜ ಬಗ್ಗೆ ಅಪಾರ ಕಾಳಜಿ ವಹಿಸುವ ಮತ್ತು ತನ್ನನ್ನು ಸಮಾಜ ಸೇವೆ ಮತ್ತು ಜನಸೇವೆಯಲ್ಲಿ ಹಗಲೂ ರಾತ್ರಿ ತೊಡಗಿಸಿಕೊಂಡ ಮೊಯ್ದಿನ್ ಬಾವಾ ರವರು ಮಾತನಾಡುತ್ತಾ, “ಇಂತಹ ಒಳ್ಳೆಯ ವಿಶಿಷ್ಟ ಕಾರ್ಯಕ್ರಮ ಮಾಡುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ಏನೆಲ್ಲಾ ಕಾರ್ಯಕ್ರಮಗಳು ನಡೆಯುವಾಗ ಇಂತಹ ಸಮಾಜಮುಖಿ ಕೆಲಸ ಮಾಡುವುದು ಮತ್ತು ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಖಂಡಿತವಾಗಿ ಈ ಬ್ಯಾರಿ ಬಾಸ್ ಕಾರ್ಯಕ್ರಮ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Leave a Reply