ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿದ ವಿದ್ಯಾರ್ಥಿಗೆ 70% ಅಂಕಗಳು ಲಭಿಸಿದೆ. ಉತ್ತರ ಪ್ರದೇಶದ ನೊಯ್ಡಾದಲ್ಲಿ ಫೇಲ್ ಆಗುವ ಭಯದಿಂದ ಫಲಿತಾಂಶದ ಎರಡು ದಿನಗಳ ಮೊದಲು ನೇಣು ಹಾಕಿಕೊಂಡ ಹತ್ತನೇ ತರಗತಿಯ ಶರ್ಮಿಷ್ಠ ಎಂಬ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ 70% ಅಂಕಗಳು ದೊರೆತಿವೆ. ಇಂಗ್ಲಿಷ್ ಪರೀಕ್ಷೆ ಬರೆದು ಬಂದ ಮೇಲೆ ಮಗಳು ಬಹಳ ಚಿಂತಿತಳಾಗಿದ್ದಳು. ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ ಎಂಬ ಚಿಂತೆ ಅವಳಲ್ಲಿತ್ತು . ಆದರೆ ಇದೇ ವಿಷಯದಲ್ಲಿ ಆಕೆಗೆ 82% ಅಂಕಗಳು ಲಭಿಸಿದೆ ಎಂದು ವಿದ್ಯಾರ್ಥಿನಿಯ ತಂದೆ ತಿಳಿಸಿದ್ದಾರೆ.

ರ‌್ಯಾಂಕುಗಳನ್ನು ಪಡೆಯಲೇ ಬೇಕೆಂಬ ಒತ್ತಡವನ್ನು, ದೊಡ್ಡ ಹೊರೆಯನ್ನು ಹೊರಿಸುವ ಹೆತ್ತವರು ಮತ್ತು ಶಾಲಾ ಶಿಕ್ಷಕರು ಒಂದೆಡೆಯಾದರೆ ದಿನೇ ದಿನೇ ಮಕ್ಕಳು ಪರೀಕ್ಷೆಗಳಿಗೆ ಹೆದರಿ ಆತ್ಮಹತ್ಯೆ ಯನ್ನು ಮಾಡಿಕೊಳ್ಳುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Leave a Reply