ರಿಯಾದ್: ಸೌದಿಅರೇಬಿಯದಲ್ಲಿಮಹಿಳೆಯರ ಫ್ಯಾಶನ್ ಶೋ ವೀಕ್ ಮುಂದಿನ ತಿಂಗಳ ಕೊನೆಯಲ್ಲಿ ನಡೆಯಲಿದೆ. ಸ್ಥಳೀಯ ಡಿಸೈನರ್ಸ್‍ಗಳನ್ನು ಸೇರಿಸಿಕೊಂಡು ಸ್ಪರ್ಧೆ ನಡೆಯಲಿದೆ. ಈ ವರ್ಷ ಎಪ್ರಿಲ್‍ನಲ್ಲಿ ಸೌದಿ ಇತಿಹಾಸದಲ್ಲಿಯೇ ಮೊತ್ತ ಮೊದಲನೆಯ ಸೌದಿ ಮಹಿಳೆಯರ ಫ್ಯಾಶನ್ ವಾರಾಚರಣೆ ನಡೆದಿತ್ತು.

ಸಾಮಾಜಿಕ ಪರಿವರ್ತನೆಯ ಯೋಜನೆಯ ಭಾಗವಾಗಿ ಫ್ಯಾಶನ್ ವೀಕ್‍ಗೆ ಅನುಮತಿ ನೀಡಲಾಗಿದೆ. ಮೊದಲ ಅವಕಾಶವನ್ನು ಅಪಾರ ಸೌದಿ ಮಹಿಳೆಯರು ಬಳಸಿಕೊಂಡಿದ್ದರು. ಎರಡನೆ ಹಂತ ಈ ತಿಂಗಳು 21ರಿಂದ25ರವರೆಗೆ ನಡೆಯಲಿದೆ.

ಸಾಮಾಜಿಕ ಕ್ಷೇತ್ರದಲ್ಲಿ ಸೌದಿ ಅರೇಬಿಯದಲ್ಲಿದದು ಕಟ್ಟುನಿಟ್ಟಿನ ನಿಬಂಧನೆಗಳು ತೆರವಾದ ಬಳಿಕ ಮಹಿಳಾ ಫ್ಯಾಶನ್ ಶೋ ಆರಂಭಿಸಲಾಗಿದೆ. ರಿಯಾದ್‍ನ ರಿಟ್ಝ್ ಕಾರ್ಲ್‍ಟನ್‍ನಲ್ಲಿ ಪ್ಯಾಶನ್ ಸ್ಪರ್ಧೆ ನಡೆಯಲಿದೆ.

Leave a Reply