ಕಮಾಂಡರ್ ಇಕ್ಬಾಲ್ ಅಹ್ಮದ್ ರವರು ಸಹ್ರಿಗಾಗಿ( ಮುಂಜಾನೆ ಉಪವಾಸ ಪ್ರಾರಂಭಿಸುವಾಗ ಸೇವಿಸುವ ಆಹಾರ) ಬೆಳಗ್ಗೆ ಬೇಗ ಎದ್ದಿದ್ದರು. ಆಗ ತನ್ನ ವೈರ್‌ಲೆಸ್ ನಲ್ಲಿ ವಿಚಿತ್ರ ಶಬ್ದ ಕೇಳಿ ಜಾಗೃತರಾದರು. ಉತ್ತರ ಕಾಶ್ಮೀರದ ಬಂಡಿಪೊರಾ ಪ್ರದೇಶದಲ್ಲಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಶಿಬಿರದ ಮೇಲೆ ಆತ್ಮಹತ್ಯೆ ದಾಳಿ ನಡೆಸಲು ಉಗ್ರವಾದಿಗಳು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಮೊದಲೇ ಅವರಿಗೆ ನೀಡಲಾಗಿತ್ತು.

ತನ್ನ ಮುಂಜಾವಿನ ಊಟವನ್ನು ತ್ಯಜಿಸಿದ ಇಕ್ಬಾಲ್ ತನ್ನ ರೈಫಲ್ ಅನ್ನು ತೆಗೆದುಕೊಂಡು ಹತ್ತಿರದ ಕ್ಯಾಂಪ್ಗೆ ಧಾವಿಸಿದರು. ಅಲ್ಲಿ ನಿಷೇಧಿತ ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಸಂಘಟನೆಗೆ ಸೇರಿರಬಹುದಾದ ನಾಲ್ಕು ಭಯೋತ್ಪಾದಕರು ದಾಳಿಯ ತಯಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದು ಅವರ ಇಕ್ಬಾಲ್ ರವರ ಸಹವರ್ತಿ ಚೇತನ್ ಚೀತಾರು ಗಾಯಗೊಂಡರು.

ಸಹ್ರಿ ಉಣ್ಣದೆ ಉಪವಾಸ ಪ್ರಾರಂಭಿಸಿ ಭಯೋತ್ಪಾದಕರ ಮೇಲೆ ದಾಳಿ ನಡೆಸಿದ ಇಕ್ಬಾಲ್ ರವರ ಎದೆಗಾರಿಕೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ. ಬೀದಿ ನಾಯಿಗಳ ಬೊಗಳುವಿಕೆಯಿಂದ ಎಚ್ಚೆತ್ತುಕೊಂಡ ಕಾರಣ ಭಯೋತ್ಪಾದಕರನ್ನು ಭೇಟೆಯಾಡಲು ಸಾಧ್ಯವಾಯಿತು ಮತ್ತು ಬೀದಿ ನಾಯಿಗಳು ಹಲವರ ಜೀವ ಉಳಿಸಿದೆ ಎಂದು ಹಿರಿಯ ಸಿಆರ್ಪಿಎಫ್ ಅಧಿಕಾರಿ ಹೇಳಿದ್ದಾರೆ.

ಈ ಘಟನೆ ಕಳೆದ ವರ್ಷ ನಡೆದಿದ್ದರೂ ತನ್ನ ಪತ್ನಿ ಮಕ್ಕಳನ್ನು ಬಿಟ್ಟು ದೇಶದ ಗಡಿ ಕಾಪಾಡುತ್ತಿರುವ ಅದೆಷ್ಟೋ ಇಕ್ಬಾಲ್, ಅಶೋಕ್, ಜೋಸೆಫ್ ಇದ್ದಾರೆ. ಅವರೆಲ್ಲರಿಗೂ ಒಂದು ಸೆಲ್ಯೂಟ್. ಜೈಹಿಂದ್, ಜೈ ಕರ್ನಾಟಕ.

Leave a Reply