ರಾಯಚೂರು: ಸ್ಥಳೀಯ ಚುನಾವಣೆಯ ಮತದಾನ ನಡೆಯುತ್ತಿದ್ದು ಪ್ರತಿಯೊಬ್ಬರೂ ಬಹಳ ಕುತೂಹಲದಿಂದ ಮತ ಚಲಾಯಿಸುತ್ತಾರೆ ಮತ್ತು ಅಭ್ಯರ್ಥಿಗಳು ತಮ್ಮ ಮತದಾರರನ್ನು ಒಲಿಸಿ ಕೊಲ್ಲಲ್ಲು ಕೊನೆವರೆಗೂ ಪ್ರಯತಿನಿಸುತ್ತಾರೆ. ಇದೆ ಸಂದರ್ಭದಲ್ಲಿ ಮತಗಟ್ಟೆ ಸಂಖ್ಯೆ 142 ರಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮತಗಟ್ಟೆಯಲ್ಲಿ ಪರಸ್ಪರ ಜಗಳಾಡಿದ ಘಟನೆ ನಗರಸಭೆ ವಾರ್ಡ್ 26 ರಲ್ಲಿ ನಡೆದಿದ್ದಾಗಿ ವರದಿಯಾಗಿದೆ.

ಬಿಜೆಪಿ ಅಭ್ಯರ್ಥಿ ವಿಜಯಾ ರಾಜ್ ಮೋತಾ ಹಾಗೂ ಪಕ್ಷೇತರ ಅಭ್ಯರ್ಥಿ ರಾಜಗೋಪಾಲ್ ಪರಸ್ಪರ ಜಗಳವಾಡಿಕೊಂಡಿದ್ದು ಇಬ್ಬರು ಅಭ್ಯರ್ಥಿಗಳು ಬೂತ್ ಗೆ ಪದೇ ಪದೇ ಭೇಟಿನೀಡಿ ತಮ್ಮ ತಮ್ಮ ಮತದಾರರ ಮನವೊಲಿಸುವ ಯತ್ನ ಮಾಡುತ್ತಿರುವುದಾಗಿ ಆರೋಪಿಸಿ ಮಾತಿನ ಚಕಮಕಿ ನಡೆಸಿ, ಕೈಕೈ ಮಿಲಾಯಿಸಿದ್ದಾರೆ. ಇದರಿಂದಾಗಿ ಸ್ವಲ್ಪ ಸಮಯ ಮತದಾನ ಸ್ಥಗಿತವಾಗಿದ್ದು, ನಂತರ ಪೊಲೀಸರಮಧ್ಯೆ ಪ್ರವೇಶದೊಂದಿಗೆ ಇಬ್ಬರನ್ನೂ ಅಲ್ಲಿಂದ ಹೊರಗೆ ಕಳುಹಿಸಲಾಗಿದ್ದು ನಂತರ ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಂಡರು.

Leave a Reply