ಗ್ರೇಟರ್ ನೋಯ್ಡಾದಲ್ಲಿ ಒಂದು ಮನೆ ಬೆಂಕಿ ತಗಳಿದ್ದು, ಬೆಂಕಿಯನ್ನು ನಂದಿಸಲು ಪೊಲೀಸಧಿಕಾರಿಯ ಸಾಹಸಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಬೆಂಕಿ ತಗುಲಿದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕಾಗಮಿಸಿದ ಪೋಲಿಸಧಿಕಾರಿ ಸ್ವತಃ ತನ್ನ ಜೀವವನ್ನು ಲೆಕ್ಕಿಸದೆ ಮನೆಯಿಂದ ಎರಡು ಸಿಲಿಂಡರ್ಗಳನ್ನು ಹೊರಗೆ ತಂದರು.

ಈ ಗ್ಯಾಸ್ ಸಿಲಿಂಡರ್ ಗಳು ಸ್ಪೋಟಗೊಂಡಿದ್ದರೆ ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಪೊಲೀಸಧಿಕಾರಿಯ ಧೈರ್ಯ ಶೌರ್ಯ ಮತ್ತು ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಿಗರು ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದು, ಅವರಿಗೆ ಬಹುಮಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬಿಲಸ್ಪುರ್ ಗ್ರೇಟರ್ ನೊಯ್ಡಾದ ದಂಖೌರ್ ಪಟ್ಟಣದಲ್ಲಿರುವ ಶಿವ ದೇವಸ್ಥಾನದ ಮುಂದೆ ಸುಂದರ್ ಸಿಂಗ್ನ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬಿಲಾಸ್ಪುರ ಪೊಲೀಸ್ ಠಾಣೆಯ ಅಖಿಲೇಶ್ ದೀಕ್ಷಿತ್ ಅವರು ತಕ್ಷಣವೇ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಧಾವಿಸಿ ಹೊದಿಕೆ ಸುತ್ತಿ ಸುತ್ತಿಕೊಂಡು ಮನೆಯೊಳಗಿನಿಂದ ಎರಡು ಸಿಲಿಂಡರ್ಗಳನ್ನು ಹೊರ ತರುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಪೊಲೀಸಧಿಕಾರಿಯಾ ಈ ಕರ್ತವ್ಯ ಪ್ರಜ್ಞೆಗೆ ಮನೆಮಂದಿ ಭಾವುಕರಾದರು.

Leave a Reply